ದರೋಡೆಕೋರರತ್ತ ಪೊಲೀಸ್ ಫೈರಿಂಗ್

ಗದಗ: ದರೋಡೆಕೋರನೊಬ್ಬನ ಮೇಲೆ ಪೊಲೀಸರು ಫೈರಿಂಗ್ ಮಾಡಿದ ಘಟನೆ ಯುಗಾದಿ ಹಬ್ಬದ ದಿನ ರಾತ್ರಿ ಮುಂಡರಗಿ ಹತ್ತಿರ ನಡೆದಿದೆ.
ರಾಯಚೂರು ಜಿಲ್ಲೆ ದೇವದರ‍್ಗ ತಾಲೂಕಿನ, ಜಾಲಹಳ್ಳಿಯ ಜನತಾ ಪ್ಲಾಟ್‌ನ ಜಯಸಿಂಹ ಮತ್ತು ಅವನ ಸಹಚರ ದರೋಡೆಕೋರರ ತಂಡ ಹಲವಾರು ಕಡೆಗಳಲ್ಲಿ ದರೋಡೆ, ಮನೆ ಕಳ್ಳತನ ಮತ್ತು ಇತರ ಅಪರಾಧಗಳಲ್ಲಿ ತೊಡಗಿತ್ತು. ಅವರನ್ನು ಬಂಧಿಸಿ ಠಾಣೆಗೆ ಕರೆದೊಯ್ಯುವಾಗ ಮುಂಡರಗಿ ತಾಲೂಕಿನ ಡಂಬಳ ಬಳಿ ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದರು.
ಆಗ ಪೊಲೀಸರು ಫೈರಿಂಗ್ ಮಾಡಿದಾಗ ದರೋಡೆಕೋರ ಜಯಸಿಂಹ ಮೊಡಕೆರ್ ಕಾಲಿಗೆ ಎರಡು ಸುತ್ತು ಗುಂಡೇಟು ತಗಲಿದೆ. ಅವನನ್ನು ಚಿಕಿತ್ಸೆಗಾಗಿ ಜಿಮ್ಸ್ಗೆ ದಾಖಲಿಸಲಾಗಿದೆ.
ದರೋಡೆಕೋರರು ಪೊಲೀಸ್ ಸಿಬ್ಬಂದಿ ವೀರೇಶ ಬಿಸನಳ್ಳಿ ಅವರ ಮೇಲೆ ಹಲ್ಲೆ ನಡೆಸಿ ಪರಾರಿಗೆ ಪ್ರಯತ್ನಿಸಿದ್ದರು.