ದಾವಣಗೆರೆ: ಕನ್ನಡ ವಿರೋಧಿ ಹೇಳಿಕೆ ನೀಡಿರುವ ನಟ ಕಮಲ್ ಹಾಸನ್ ಅಭಿನಯದ ಥಗ್ ಲೈಫ್ ಚಿತ್ರ ಇದೇ ಜೂನ್ ೫ರಂದು ತೆರೆಕಾಣುತ್ತಿದ್ದು, ಚಿತ್ರದ ಪೋಸ್ಟರ್ ಗಳನ್ನು ಅಂಟಿಸಿ ಸಿದ್ಧತೆ ನಡೆಸಿರುವುದನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದಿಂದ ಮಂಗಳವಾರ ಗೀತಾಂಜಲಿ ಚಿತ್ರಮಂದಿರಕ್ಕೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಯಿತು.
ನಗರದ ಗೀತಾಂಜಲಿ ಮತ್ತು ಎಸ್ಎಸ್ ಮಾಲ್‌ಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ ಕರವೇ ಕಾರ್ಯಕರ್ತರು ಚಿತ್ರ ಬಿಡುಗಡೆ ಮಾಡದಂತೆ ಅಲ್ಲಿನ ವ್ಯವಸ್ಥಾಪಕರುಗಳಿಗೆ ಮನವಿ ಸಲ್ಲಿಸಿದರು.
ಇದೇ ವೇಳೆ ಮಾತನಾಡಿದ ಕರವೇ ಜಿಲ್ಲಾಧ್ಯಕ್ಷ ಎಂಎಸ್ ರಾಮೇಗೌಡ, ತಮಿಳು ಭಾಷೆಯಿಂದ ಕನ್ನಡ ಹುಟ್ಟಿದ್ದು ಎಂಬ ಮುಟ್ಟಾಳತನದ ಹೇಳಿಕೆ ಕೊಟ್ಟಿರುವ ನಟ ಕಮಲ್ ಹಾಸನ್ ವಿರುದ್ಧ ರಾಜ್ಯ ವ್ಯಾಪ್ತಿ ಪ್ರತಿಭಟನೆ ನಡೆಸಲಾಗಿದೆ. ಕ್ಷಮೆ ಕೇಳಿದರೆ ಮಾತ್ರ ಸಿನಿಮಾಕ್ಕೆ ಅವಕಾಶ ಕಲ್ಪಿಸಲಾಗುವುದೆಂದು ತಿಳಿಸಿದ್ದರೂ ಇಲ್ಲಿವರೆಗೂ ಕಮಲ ಹಾಸನ್ ಕ್ಷಮೆ ಕೇಳದೆ ದುರಂಕಾರ ತೋರಿಸುತ್ತಿದ್ದು, ಈಗ ಕರ್ನಾಟಕದಲ್ಲಿ ಚಿತ್ರ ಪ್ರದರ್ಶನ ನಿಷಿದ್ಧಗೊಳಿಸುವುದಾಗಿ ಹೇಳಿದ್ದ ವಾಣಿಜ್ಯ ಮಂಡಳಿ ವಿರುದ್ಧ ಹೈಕೋರ್ಟ್ ನಲ್ಲಿ ಬಿಡುಗಡೆಗೆ ಅವಕಾಶ ನೀಡುವಂತೆ ದಾವೆ ಹೂಡಿದ್ದಾನೆ. ಇದು ಅವನ ದುರಹಂಕಾರದ ಪರಮಾವಧಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ. ಕನ್ನಡ ಭಾಷೆಗಿಂತ ಯಾರು ದೊಡ್ಡವರಲ್ಲ. ಇವನ ವಿರುದ್ಧ ಯಾವುದೇ ಕಾರಣಕ್ಕೂ ಸರ್ಕಾರ ಯಾವುದೇ ಮುಲಾಜಿಲ್ಲದೆ ಥಗ್ ಲೈಫ್ ಸಿನಿಮಾವನ್ನು ರದ್ದುಪಡಿಸಬೇಕು. ಕೆಲವು ಕನ್ನಡ ವಿರೋಧಿ ಚಿತ್ರಮಂದಿರ ಮಾಲೀಕರು ಈತನ ಸಿನಿಮಾವನ್ನು ಹೊರ ತರಲು ಮುಂದಾಗಿರುವುದು ಖಂಡನೀಯ. ಅದರಲ್ಲೂ ದಾವಣಗೆರೆ ರಾಜನಹಳ್ಳಿ ಹನುಮಂತಪ್ಪ ಕುಟುಂಬ ವಂಶಸ್ಥರೇ ಇಂಥ ನಾಡದ್ರೋಹಿ ಕೆಲಸ ಮಾಡುವುದು ಸಹಿಸಲಸಾಧ್ಯ ಎಂದು ಹರಿಹಾಯ್ದರು.
ತಕ್ಷಣ ಥಗ್ ಲೈಫ್ ಸಿನಿಮಾ ವನ್ನ ಯಾವುದೇ ಕಾರಣಕ್ಕೂ ಪ್ರದರ್ಶನ ಮಾಡಬಾರದು. ಇವರ ಜೊತೆಗೆ ನಗರದಲ್ಲಿರುವ ಚಿತ್ರಮಂದಿರಗಳು ಅಶೋಕ, ತ್ರಿಶೂಲ್, ತ್ರಿನೇತ್ರ ಹಾಗೂ ಯಾವ ಚಿತ್ರಮಂದಿರದವರು ಹಾಕಿದರೂ ಸಹ ಮತ್ತು ಎಸ್ ಎಸ್ ಮಾಲ್ ನಲ್ಲಿ ಇದಕ್ಕೂ ಮೀರಿ ಮಾಡಿದರೆ ಮುಂದೆ ಆಗುವ ಅನಾಹುತಗಳಿಗೆ ಚಿತ್ರಮಂದಿರ ಮಾಲೀಕರೇ ಹೊಣೆಗಾರರು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಮಹಿಳಾ ಘಟಕದ ಮಂಜುಳಾ ಮಾಂತೇಶ್, ಮೀನಾಕ್ಷಮ್ಮ, ಸರೋಜಮ್, ಗೋಪಾಲ ದೇವರಮನೆ, ಜಬಿ ಉಲ್ಲಾ, ಗಿರೀಶ್ ಕುಮಾರರ್, ಆಟೋ ರಫೀಕ್, ಸುರೇಶ್, ತುಳಸಿ ರಾಮ್, ರಾಕಿ, ವಿನಯ್, ಚಂದ್ರು, ಆಟೋ ರಫಿಕ್, ಗುರುಮೂತ್ರಿ, ಮುಸ್ತಫ ಇಬ್ರಾಹಿಂ, ಸಾಧಿಕ್, ಹಬ್ಬು, ಪೈಲ್ವಾನ್ ಜಬಿವುಲ್ಲಾ, ನಾಗರಾಜ್, ಸುರೇಶ್, ರಮೇಶ, ರಾಕೇಶ್, ಅಕ್ಷಯ್, ಬಸವರಾಜು, ಅಬ್ಬು ಮಂಜುನಾಥ್, ದಾದಾಪೀರ್, ಕಾಲ್ ಲಾಲ್ ಚೌದ್ರಿ, ಮಹೇಂದ್ರ ಮತ್ತಿತರರು ಉಪಸ್ಥಿತರಿದ್ದರು.