ಥಗ್‌ ಲೈಫ್‌ಗೆ ಕರ್ನಾಟಕದಲ್ಲಿ ಬಿಡುಗಡೆಗೆ ಅವಕಾಶ: ಇಷ್ಟವಿಲ್ಲ ಎಂದಾದರೆ ನೋಡಬೇಡಿ ಎಂದ ಸುಪ್ರೀಂ

ನವದೆಹಲಿ: ನಟ ಕಮಲ್ ಹಾಸನ್ ಸಿನಿಮಾ ‘ಥಗ್ ಲೈಫ್’ ಚಿತ್ರ ಕರ್ನಾಟಕದಲ್ಲಿ ಬಿಡುಗಡೆಗೊಳಿಸಲು ಸುಪ್ರೀಂ ಕೋರ್ಟ್ ನ್ಯಾಯಾಲಯ ನಟನ ಪರ ಆದೇಶ ಹೊರಡಿಸಿದೆ.
ಇಂದು ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, ಚಿತ್ರ ಬಿಡುಗಡೆಗೆ ತಡೆ ಹೇರುವುದು ಸರಿಯಲ್ಲ. ನೆಲದ ಕಾನೂನು ಎತ್ತಿಹಿಡಿಯುವುದು ಮುಖ್ಯ. ಕ್ಷಮೆ ಕೇಳಿ ಎಂದು ಒತ್ತಾಯಿಸುವುದು ಕೂಡ ಸರಿಯಲ್ಲ. ಸಿನಿಮಾ ನೋಡಲು ಇಷ್ಟವಿಲ್ಲ ಎಂದಾದರೆ ನೋಡಬೇಡಿ ಎಂದು ಸುಪ್ರೀಂಕೋರ್ಟ್‌ನ ಜಸ್ಟೀಸ್ ಮನಮೋಹನ್, ಜೆ. ಭುಯನ್ ಅವರನ್ನೊಳಗೊಂಡ ಪೀಠವು ಆದೇಶ ನೀಡಿದೆ. ಕನ್ನಡ ಭಾಷೆ ಕುರಿತಂತೆ ನಟ ಕಮಲ್ ಹಾಸನ್ ಹೇಳಿಕೆಗೆ ಕ್ಷಮೆಯಾಚಿಸಲು ಅಥವಾ ವಿಷಾಧಿಸಲು ಕರ್ನಾಟಕ ಹೈಕೋರ್ಟ್‌ಗೆ ಯಾವುದೇ ಹಕ್ಕಿಲ್ಲ ಎಂದ ಸುಪ್ರೀಂ ಕೋರ್ಟ್‌ ಒತ್ತಿ ಹೇಳಿದೆ. ಸದ್ಯ ಅರ್ಜಿ ವಿಚಾರಣೆಯನ್ನು ಗುರುವಾರಕ್ಕೆ (ಜೂ.19) ಮುಂದೂಡಲಾಗಿದೆ. ಸಿಬಿಎಫ್‌ಸಿ ಸರ್ಟಿಫಿಕೇಟ್ ಆಧಾರದ ಮೇರೆಗೆ ಸಿನಿಮಾ ಬಿಡುಗಡೆ ಮಾಡಬಹುದು ಎಂದು ಸುಪ್ರೀಂಕೋರ್ಟ್ ಹೇಳಿದೆ. ಈ ಮೂಲಕ ಕರ್ನಾಟಕದಲ್ಲಿ ಕಮಲ್ ಹಾಸನ್ ಅಭಿನಯದ ಥಗ್ ಲೈಫ್ ಚಿತ್ರದ ರಿಲೀಸ್‌ಗೆ ಕೋರ್ಟ್ ಅನುಮತಿ ಸೂಚಿಸಿದೆ.