‘ತ್ರಿವೇಣಿ’ ಆಲ್ಬಮ್‌ಗೆ 67ನೇ ಗ್ರ್ಯಾಮಿ ಪ್ರಶಸ್ತಿ

0
21

ಭಾರತ ಮೂಲದ ಅಮೆರಿಕ ಪ್ರಜೆ ಚಂದ್ರಿಕಾ ಟಂಡನ್ ಅವರು ತಮ್ಮ ‘ತ್ರಿವೇಣಿ’ ಆಲ್ಬಮ್‌ಗೆ 67ನೇ ಗ್ರ್ಯಾಮಿ ಪ್ರಶಸ್ತಿಯನ್ನು ಗೆದ್ದಿದ್ದಾರೆ.
ಭಾರತೀಯ ಶಾಸ್ತ್ರೀಯ ಸಂಗೀತ, ವೈದಿಕ ಪಠಣ ಮತ್ತು ಅಂತರರಾಷ್ಟ್ರೀಯ ಸಂಪ್ರದಾಯಗಳನ್ನು ಒಳಗೊಂಡ ಈ ಆಲ್ಬಮ್ ‘ಬೆಸ್ಟ್ ನ್ಯೂ ಏಜ್’ ವಿಭಾಗದಲ್ಲಿ ಪ್ರಶಸ್ತಿ ಪಡೆದಿದೆ. ಮೂರು ನದಿಗಳ ಸಂಗಮದ ಹೆಸರಿನ ಆಲ್ಬಮ್‌ನಲ್ಲಿ ಅವರು ದಕ್ಷಿಣ ಆಫ್ರಿಕಾದ ಕೊಳಲುವಾದಕ ವೌಟರ್ ಕೆಲ್ಲರ್‌ಮನ್ ಮತ್ತು ಜಪಾನಿನ ಚೆಲೋವಾದಕ ಎರು ಮಾಟ್ಸುಮೊಟೊ ಅವರೊಂದಿಗೆ ಸೇರಿ ಹಾಡನ್ನು ಹಾಡಿದ್ದರು. ಈ ಅಲ್ಬಂನಲ್ಲಿ ವೈದಿಕ ಮಂತ್ರಗಳನ್ನು ಪಠಿಸಿದ್ದರು. ತ್ರಿವೇಣಿ’ ಆಲ್ಬಂ ಭಾರತೀಯ ಶಾಸ್ತ್ರೀಯ ಸಂಗೀತ, ವೈದಿಕ ಪಠಣಗಳು ಮತ್ತು ಅಂತರಾಷ್ಟ್ರೀಯ ಸಂಪ್ರದಾಯಗಳನ್ನು ಒಳಗೊಂಡಿದೆ. ಚಂದ್ರಿಕಾ ಹುಟ್ಟಿ ಬೆಳೆದಿದ್ದು ಚೆನ್ನೈನಲ್ಲಿ. ಚಂದ್ರಿಕಾ ಮತ್ತು ಇಂದ್ರಾ ಅವರು ವೈದಿಕ ಪಠಣ ಮತ್ತು ಕರ್ನಾಟಕ ಸಂಗೀತ ಮನೆಯ ಸಾಂಪ್ರದಾಯಿಕ ಭಾಗವಾಗಿತ್ತು.

Previous articleಸರ್ಕಾರ ಸಮಾಜ ಪೀಡಕ ದುಷ್ಟರಿಗೆ ಪರೋಕ್ಷವಾಗಿ ಬೆಂಬಲಿಸುತ್ತಿದೆ
Next articleಗ್ಯಾಸ್ ಆಟೋದಲ್ಲಿ ದಿಢೀರ್ ಬೆಂಕಿ