ತೋವಿವಿ ಘಟಿಕೋತ್ಸವ: ಟೈಲರ್ ಮಗಳಿಗೆ ೧೭ ಚಿನ್ನದ ಪದಕ

ಬಾಗಲಕೋಟೆ: ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ೧೪ನೇ ಘಟಿಕೋತ್ಸವ ಮಂಗಳವಾರ ಜರುಗಿತು. ಬಿಎಸ್ಸಿ ತೋಟಗಾರಿಕೆಯಲ್ಲಿ ವಿದ್ಯಾರ್ಥಿನಿ ಸಹನಾ ಪಟಗೆ ೧೭ ಚಿನ್ನದ ಪದಕ, ಭೀಮವ್ವ ಕರಕಿಹಳ್ಳಿ ೧೬ ಚಿನ್ನದ ಪದಕಗಳನ್ನು ಸ್ವೀಕರಿಸಿ ಗಮನಸೆಳೆದರು.

ವಿವಿ ಕುಲಾಧಿಪತಿಗಳೂ ಆದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿದರು.

೧೭ ಚಿನ್ನದ ಪದಕ ತಮ್ಮದಾಗಿಸಿಕೊಂಡಿರುವ ಸಹನ ಪಟಗೆ ಅವರು ವಿಜಯನಗರ ಜಿಲ್ಲೆ ಹೂವಿನಹಡಗಲಿ ಅವರು. ಅವರ ತಂದೆ ಮಂಜುನಾಥ ಅವರು ವೃತ್ತಿಯಲ್ಲಿ ಟೇಲರ್ ಆಗಿದ್ದಾರೆ, ತಾಯಿ ಶೋಭಾ ಮನೆಗೆಲಸ ಮಾಡಿ ಮಗಳನ್ನು ಬೆಳೆಸಿದ್ದಾರೆ.

೧೬ ಚಿನ್ನದ ಪದಕ ಪಡೆದಕೊಂಡಿರುವ ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ತಳಬಾಳದ ಭೀಮವ್ವ ಅವರ ತಂದೆ ಸಣ್ಣನಿಂಗಪ್ಪ, ತಾಯಿ ಯಲ್ಲವ್ವ ಕೃಷಿಕರಾಗಿದ್ದಾರೆ‌. ಕಡುಬಡತನದ ಹಿನ್ನೆಲೆಯ ಇಬ್ಬರೂ ವಿದ್ಯಾರ್ಥಿನಿಯರು ಬೀದರ್ ತೋಟಗಾರಿಕೆ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದಾರೆ. ರರಾಶಿ ಚಿನ್ನದ ಪದಕಗಳನ್ನು ಬಾಚಿಕೊಂಡು ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.

ಕಾರ್ಯಕ್ರಮದಲ್ಲಿ ಪಿಎಚ್ಡಿ ವಿಭಾಗದಲ್ಲಿ ಮೂರು ವಿದ್ಯಾರ್ಥಿಗಳು, ಎಂಎಸ್ಸಿಯಲ್ಲಿ ೧೨ ಹಾಗೂ ಬಿಎಸ್ಸಿಯಲ್ಲಿ ಒಟ್ಟು ೧೭ ವಿದ್ಯಾರ್ಥಿಗಳಿಗೆ ಚಿನ್ನದ ಪದಕಗಳನ್ನು ಪ್ರದಾನ ಮಾಡಲಾಯಿತು.