ಉಡುಪಿ: ಇಲ್ಲಿಗೆ ಸಮೀಪದ ಉದ್ಯಾವರ ಕೇದಾರ್ ಎಂಬಲ್ಲಿ ವ್ಯಕ್ತಿಯೋರ್ವರು ಕಾಲು ಜಾರಿ ತೋಡಿಗೆ ಬಿದ್ದು ಮೃತರಾದ ಘಟನೆ ಭಾನುವಾರ ಸಂಭವಿಸಿದೆ. ರೊನಾಲ್ಡ್ ಫೆರ್ನಾಂಡಿಸ್ (52) ಎಂಬವರು ಮೃತರಾದವರಾಗಿದ್ದು, ಅವರು ಕೆಲಸ ಮುಗಿಸಿ ಮನೆ ಬಳಿ ಬರುತ್ತಿದ್ದಾಗ ಮನೆ ಹಿಂಬದಿಯ ತೋಡಿ ಗೆ ಆಕಸ್ಮಿಕವಾಗಿ ಬಿದ್ದು ಸಾವನ್ನಪ್ಪಿದ್ದಾರೆ.
ಮೃತರು ಅವಿವಾಹಿತರಾಗಿದ್ದು, ತಾಯಿ ಮತ್ತು ಸಹೋದರರನ್ನು ಅಗಲಿದ್ದಾರೆ.