ತೆಂಗಿನ ಕಡ್ಡಿ ಎದೆ ಭಾಗಕ್ಕೆ ಹೊಕ್ಕು ಗಂಭೀರ ಸ್ಥಿತಿಯಲ್ಲಿದ್ದ ಬಾಲಕ ಗುಣಮುಖ

ಮಂಗಳೂರು: ತೆಂಗಿನ ಕಡ್ಡಿ ಎದೆ ಭಾಗಕ್ಕೆ ಹೊಕ್ಕು ಗಂಭೀರ ಸ್ಥಿತಿಯಲ್ಲಿದ್ದು ವೆನ್ಲಾಕ್‌ ಸರ್ಕಾರಿ ಆಸ್ಪತ್ರೆಯ ವೈದ್ಯರಿಂದ ಶಸ್ತ್ರಚಿಕಿತ್ಸೆಗೆ ಒಳಗಾಗಿ ಪ್ರಾಣಾಪಾಯದಿಂದ ಪಾರಾದ ಅಸ್ಸಾಮಿನ 12 ವರ್ಷದ ಬಾಲಕ ಕಮಲ್‌ ಹಾಸನ್‌ ಇದೀಗ ಸಂಪೂರ್ಣ ಗುಣಮುಖನಾಗಿ ಆಸ್ಪತ್ರೆಯಿಂದ ಡಿಸ್‌ಚಾರ್ಜ್‌ ಆಗಿದ್ದಾನೆ.
ಕೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ವೇಳೆ ಫೆ.8ರಂದು ಈತನ ಕುತ್ತಿಗೆ ಮೂಲಕ ತೆಂಗಿನ ಕಡ್ಡಿ ಎದೆ ಭಾಗಕ್ಕೆ ಹೊಕ್ಕಿತ್ತು. ಮಾರಣಾಂತಿಕ ಸ್ಥಿತಿಯಲ್ಲಿದ್ದ ಬಾಲಕನನ್ನು ಮಂಗಳೂರಿನ ವೆನ್ಲಾಕ್‌ ಆಸ್ಪತ್ರೆಗೆ ಸೇರಿಸಲಾಗಿತ್ತು. ಆಸ್ಪತ್ರೆಯಲ್ಲಿ ಕಾರ್ಡಿಯೋಥೋರಾಸಿಕ್‌ ಮತ್ತು ಸಿಟಿವಿಎಸ್‌ ತಂಡ ಡಾ.ಸುರೇಶ್‌ ಪೈ ನೇತೃತ್ವದಲ್ಲಿ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿ ದೇಹದಿಂದ ಅದನ್ನು ತೆಗೆದುಹಾಕುವಲ್ಲಿ ಯಶಸ್ವಿಯಾಗಿತ್ತು. ಬಳಿಕ ಆತ ಚೇತರಿಕೆ ಕಂಡಿದ್ದ.