ತುಮಕೂರು: 350 ಕೋಟಿ ರೂ. ವೆಚ್ಚದಲ್ಲಿ 5 ಮೇಲ್ಸೇತುವೆ

0
21

ಬೆಂಗಳೂರು: ಜಿಲ್ಲೆಯಲ್ಲಿ 350 ಕೋಟಿ ರೂ. ವೆಚ್ಚದಲ್ಲಿ 5 ಮೇಲ್ಸೇತುವೆಗಳ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ ಎಂದು ಕೇಂದ್ರ ರೈಲ್ವೆ ಸಚಿವ ವಿ ಸೋಮಣ್ಣ ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಈ ಕುರಿತಂತೆ ಪೋಸ್ಟ್‌ ಮಾಡಿರುವ ಅವರು ರಸ್ತೆ ಮತ್ತು ರೈಲು ಸಾರಿಗೆಯನ್ನು ಮತ್ತಷ್ಟು ಸುಗಮ ಹಾಗೂ ಸುರಕ್ಷಿತಗೊಳಿಸಲು ತುಮಕೂರು ಜಿಲ್ಲೆಯಲ್ಲಿ 350 ಕೋಟಿ ರೂ. ವೆಚ್ಚದಲ್ಲಿ 5 ಮೇಲ್ಸೇತುವೆಗಳ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ. ಕಾಮಗಾರಿಗಳನ್ನು ಆರಂಭಿಸಿ ಶೀಘ್ರವೇ ಲೋಕಾರ್ಪಣೆಗೊಳಿಸಲು ಕ್ರಮವಹಿಸಲಾಗುತ್ತದೆ ಎಂದಿದ್ದಾರೆ.

ತುಮಕೂರಿನ ಕ್ಯಾತಸಂದ್ರ ರೈಲ್ವೆ ಸ್ಟೇಷನ್ – ಮೈದಾಳ ಗೇಟ್ ಮೇಲ್ಸೇತುವೆ, ಬಡ್ಡಿಹಳ್ಳಿ ಗೇಟ್ ಅಗ್ನಿಶಾಮಕ ದಳದ ಕಚೇರಿ ಬಳಿ ಮೇಲ್ಸೇತುವೆ, ಬಟವಾಡಿ ಗೇಟ್ ಮೇಲ್ಸೇತುವೆ, ಹರೆಯೂರು ರಸ್ತೆ, ಮಲ್ಲಸಂದ್ರ ಗೇಟ್ ಮೇಲ್ಸೇತುವೆ ನಿರ್ಮಾಣ

Previous articleಕುಮ್ಕಿ ಭೂಮಿಗೆ ಕೈ ಹಾಕಿದರೆ…. ದಿಟ್ಟ ಉತ್ತರ ನೀಡಲು ಬದ್ಧ
Next articleಮಹಾ ಮಳೆಗೆ ಕಾರವಾರದಲ್ಲಿ ಗುಡ್ಡ ಕುಸಿತ : ನದಿಗೆ ಬಿದ್ದ ಟ್ಯಾಂಕರ್, ಐವರು ನಾಪತ್ತೆ