ಬಳ್ಳಾರಿ: ತಾಲೂಕಿನ ದೇಶನೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ತುಂಗಭದ್ರಾ ನದಿಯ ಸೇತುವೆ ಮೇಲಿಂದ ರಾಜಸ್ಥಾನ ಮೂಲದ ಯುವಕನೊಬ್ಬ ನದಿಗೆ ಹಾರಿದ್ದಾನೆ ಎನ್ನುವ ಮಾಹಿತಿ ಮೇರೆಗೆ ಎನ್‌ಡಿಆರ್‌ಎಫ್ ತಂಡ ಕಾರ್ಯಾಚರಣೆಗೆ ಇಳಿದಿದೆ.
ಧನ್ಯರಾಮಕುಶಾಲ್ರಾಮ್(20) ಎಂಬಾತ ಮಧ್ಯಾಹ್ನ 12ಗಂಟೆಗೆ ನದಿಗೆ ಹಾರಿದ್ದಾನೆಂದು ಹೇಳಲಾಗುತ್ತಿದೆ. ಆದರೆ ಯುವಕ ನದಿಗೆ ಹಾರಿದ್ದನ್ನು ಯಾರೂ ನೋಡಿಲ್ಲ. ಆದರೆ ನದಿ ದಡದಲ್ಲಿ ಯುವಕನಿಗೆ ಸೇರಿದ ಬೈಕ್ ಪತ್ತೆಯಾಗಿದ್ದು, ಬೈಕ್ ಮೇಲೆ ತಮ್ಮ ಸಂಬಂಧಿಕರ ಮೊಬೈಲ್ ನಂಬರ್ ಬರೆದು, ಯುವಕ ನದಿಗೆ ಹಾರಿದ್ದಾನೆಂದು ಹೇಳಲಾಗುತ್ತಿದ್ದು, ಅಗ್ನಿಶಾಮಕ ದಳ ಸಿಬ್ಬಂದಿ ಮತ್ತು ನುರಿತ ಈಜುಗಾರರಿಂದ ಕಾರ್ಯಾಚರಣೆ ನಡೆದಿದೆ ಎಂದು ಡಿವೈಎಸ್ಪಿ ವೆಂಕಟೇಶ್ ತಿಳಿಸಿದ್ದಾರೆ.
ಸ್ಥಳಕ್ಕೆ ತಹಸೀಲ್ದಾರ್ ಎಚ್. ವಿಶ್ವನಾಥ್, ಡಿವೈಎಸ್‌ಪಿ ವೆಂಕಟೇಶ್, ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಹನುಮನಗೌಡ ಪಾಟೀಲ್, ಸಿಪಿಐ ಹನುಮಂತಪ್ಪ, ಪಿಎಸ್ಐ ಪರಶುರಾಮ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.