ತುಂಗಭದ್ರಾ ಜಲಾಶಯಕ್ಕೆ ಸಿಎಂ: ಪ್ರವೇಶ ನಿರ್ಬಂಧ

0
32

ಬಳ್ಳಾರಿ: ತುಂಗಭದ್ರಾ ಜಲಾಶಯದ ೧೯ನೇ ಕ್ರಸ್ಟ್‌ ಗೇಟ್ ಕೊಚ್ಚಿ ಹೋದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸುತ್ತಿದ್ದು, ವಿಜಯನಗರ ಬಳಿಯ ಡ್ಯಾಂ ಪ್ರವೇಶ ದ್ವಾರದಲ್ಲಿ ಎಲ್ಲರಿಗೂ ನಿರ್ಬಂಧ ವಿಧಿಸಲಾಗಿದೆ.
ಕಾಂಗ್ರೆಸ್, ಬಿಜೆಪಿ ಮುಖಂಡರು ಸೇರಿ ಮಾಧ್ಯಮದವರಿಗೂ ಪ್ರವೇಶ ತಡೆಯಲಾಗಿದೆ. ಈ ಮಾರ್ಗದ ಬದಲಾಗಿ ಕೊಪ್ಪಳ ಜಿಲ್ಲೆಯ ಮುನಿರಾಬಾದ್ ಬಳಿ ಇರುವ ಪ್ರವೇಶ ದ್ವಾರದ ಮೂಲಕ ಬಿಡಲಾಗುತ್ತಿದೆ.
ಬಿಗಿ ಬಂದೋಬಸ್ತ್; ಇನ್ನು ಸಿಎಂ ಸಿದ್ದರಾಮಯ್ಯ ಬರುವ ಹಿನ್ನೆಲೆಯಲ್ಲಿ ತುಂಗಭದ್ರಾ ಜಲಾಶಯದ ಎರಡು ಕಡೆಗೂ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ. ಎರಡು ಜಿಲ್ಲೆಯ ಕೊಪ್ಪಳ, ವಿಜಯನಗರ ಎಸ್ಪಿ ಗಳ ನೇತೃತ್ವದಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.

Previous articleಕಂಚಿನಡ್ಕ ಟೋಲ್ ರದ್ದುಗೊಳಿಸದಿದ್ದರೆ ಉಗ್ರ ಹೋರಾಟ
Next articleತುಂಗಭದ್ರಾ ಜಲಾಶಯಕ್ಕೆ ಬಳ್ಳಾರಿ ಬಿಜೆಪಿ ನಿಯೋಗ