ಬಳ್ಳಾರಿ: ತುಂಗಭದ್ರಾ ಜಲಾಶಯದ ೧೯ ನೇ ಕ್ರಸ್ಟ್ ಗೇಟ್ ಕೊಚ್ಚಿ ಹೋದ ಹಿನ್ನೆಲೆಯಲ್ಲಿ ಅಪಾರ ಪ್ರಮಾಣದ ನೀರು ಹರಿದು ಹೋಗುತ್ತಿದ್ದು, ಮಾಜಿ ಸಚಿವ ಬಿ.ಶ್ರೀರಾಮುಲು ನೇತೃತ್ವದಲ್ಲಿ ಬಳ್ಳಾರಿ ಬಿಜೆಪಿ ಮುಖಂಡರ ನಿಯೋಗ ಜಲಾಶಯಕ್ಕೆ ಮಂಗಳವಾರ ಭೇಟಿ ನೀಡಿದೆ.
ಬಿ.ಶ್ರೀರಾಮುಲು, ಮಾಜಿ ಶಾಸಕ ಸುರೇಶಬಾಬು, ಸಿದ್ದಾರ್ಥಸಿಂಗ್, ನೇಮಿರಾಜ್ ನಾಯ್ಕ, ಚಂದ್ರನಾಯ್ಕ, ಕೃಷ್ಣಾ ನಾಯ್ಕ, ಸೋಮಲಿಂಗಪ್ಪ ಸೇರಿ ಹಲವರು ಭೇಟಿ ನೀಡಿದ್ದಾರೆ. ಜಲಾಶಯದ ಅವಘಡ ಸಂಬಂದ ನೂರಾರು ರೈತರು ಜಲಾಶಯದ ಪ್ರವೇಶ ದ್ವಾರದ ಬಳಿ ಜಮಾಯಿಸುತ್ತಿದ್ದಾರೆ. ನೀರು ಪೋಲಾದರೆ ಮುಂದಿನ ಭವಿಷ್ಯವೇನು ಎನ್ನುವ ದಿಗಿಲು ಹಿನ್ನೆಲೆಯಲ್ಲಿ ರೈತರು, ಮುಖಂಡರು ತಂಡೋಪ ತಂಡವಾಗಿ ನಿಲ್ಲುತ್ತಿದ್ದಾರೆ. ಹೀಗಾಗಿ ಬಿಜೆಪಿ ಮುಖಂಡರು ಸಹಿತ ರೈತ ಪರವಾಗಿ ಜಲಾಶಯಕ್ಕೆ ಆಗಮಿಸಿದ್ದಾರೆ. ಕ್ರಸ್ಟ್ ಗೇಟ್ ಅಳವಡಿಕೆ, ನೀರು ಹರಿದು ಹೋಗುತ್ತಿರುವ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತಿದ್ದಾರೆ.