ತೀವ್ರ ಮಳೆ: ಪಂಪ್‌ವೆಲ್, ಕೆತ್ತಿಕಲ್‌ಗೆ ಡಿಸಿ ಭೇಟಿ

0
24

ಮಂಗಳೂರು: ಪಂಪ್‌ವೆಲ್ ಹಾಗೂ ಕೆತ್ತಿಕಲ್‌ಗೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಭೇಟಿ ನೀಡಿ ಪರಿಶೀಲಿಸಿದರು.
ಅವರು ಮಂಗಳವಾರ ನಗರದ ಪಂಪ್‌ವೆಲ್‌ನಲ್ಲಿ ತೀವ್ರ ಮಳೆ ಸಂದರ್ಭದಲ್ಲಿ ನೀರು ನಿಂತು ಸಮಸ್ಯೆಯಾಗುತ್ತಿರುವ ಕುರಿತು ಸಮಸ್ಯೆ ಪರಿಹರಿಸಲು ರಾಜಕಾಲುವೆಯಲ್ಲಿ ನೀರಿನ ಸರಾಗ ಹರಿವಿಗೆ ತಾಂತ್ರಿಕವಾಗಿ‌ ಸಮಸ್ಯೆ ಬಗೆಹರಿಸಲು ನಗರ ಪಾಲಿಕೆ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದರು.
ಕೆತ್ತಿಕಲ್‌ನಲ್ಲಿ ಇನ್ನಷ್ಟು ಭೂಕುಸಿತ ತಡೆಯಲು ಮತ್ತು ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಗಮ ಸಂಚಾರಕ್ಕೆ ತಾಂತ್ರಿಕ ಪರಿಹಾರವನ್ನು ಕೂಡಲೇ ಕೈಗೊಳ್ಳಲು ಜಿಲ್ಲಾಧಿಕಾರಿಗಳು ಹೆದ್ದಾರಿ ಪ್ರಾಧಿಕಾರಕ್ಕೆ ನಿರ್ದೇಶಿಸಿದರು. ಮಹಾನಗರ ಪಾಲಿಕೆ ಆಯುಕ್ತ ರವಿಚಂದ್ರ ನಾಯಕ್, ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಅಬ್ದುಲ್ಲಾ ಜಾವೇದ್ ಮತ್ತಿತರರು ಈ ಸಂದರ್ಭದಲ್ಲಿ ಇದ್ದರು.

Previous articleಹಿಂದೂಗಳಿಗೆ ಕಿರುಕುಳ: ತನಿಖೆ ಆರಂಭಿಸಿದ ಮಾನವ ಹಕ್ಕು ಆಯೋಗ
Next article8 ವರ್ಷದ ಬಳಿಕ  2ಸಾವಿರ ಚಾಲಕ ಕಂ ನಿರ್ವಾಹಕರಿಗೆ ನಿಯೋಜನಾ ಆದೇಶ ಪತ್ರ ವಿತರಣೆ