ತಿಮ್ಮಪ್ಪನ ಪ್ರಸಾದ ವಿಚಾರದಲ್ಲಿ ದೊಡ್ಡ ದ್ರೋಹ

0
19

ಮಂಗಳೂರು: ತಿರುಪತಿ ತಿಮ್ಮಪ್ಪನ ಪ್ರಸಾದ ವಿಚಾರದಲ್ಲಿ ಬಹಳ ದೊಡ್ಡ ದ್ರೋಹ ಮಾಡಿದ್ದಾರೆ. ಈ ಬಗ್ಗೆ ಸಂಪೂರ್ಣ ತನಿಖೆ‌ ಆಗಬೇಕು ಎಂದು ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಗಂಗಾಧರ್ ಕುಲಕರ್ಣಿ ಆಕ್ರೋಶ ಹೊರಹಾಕಿದ್ದಾರೆ.
ಮಂಗಳೂರಿನಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಉದ್ದೇಶಪೂರ್ವಕವಾಗಿ ಇದನ್ನ ಮಾಡಲಾಗಿದೆ. ಈ ವಿಷಯವನ್ನು ಇಲ್ಲಿಗೆ ಬಿಡುವ ಪ್ರಶ್ನೆ ಇಲ್ಲ. ತಪ್ಪಿತಸ್ಥರ ಮೇಲೆ‌ ಕಾನೂನು ಕ್ರಮ ಆಗಬೇಕು. ಇಡೀ ದೇಶದ ಎಲ್ಲಾ‌ ಹಿಂದೂ‌ ಸಂಘಟನೆಗಳು ಸೇರಿ ಜಗನ್‌ ಮನೆಗೆ ಮುತ್ತಿಗೆಗೆ ಚಿಂತನೆ‌ ನಡೆಯುತ್ತಿದೆ ಎಂದರು.
ಇಡೀ ಹಿಂದೂ ಸಮಾಜಕ್ಕೆ ಆಘಾತ ಮಾಡಿದ್ದಾರೆ. ಇದನ್ನು ಸಹಿಸಲು ಸಾಧ್ಯವಿಲ್ಲ. ಅಲ್ಲದೇ ತಿರುಪತಿಯಲ್ಲಿ ತಕ್ಷಣಕ್ಕೆ ಒಂದು ಸುಸಜ್ಜಿತ ಲ್ಯಾಬ್ ಆಗಬೇಕು ಎಂದು‌ ಆಗ್ರಹಿಸಿದರು.

Previous articleಬೋನಿಗೆ ಬಿದ್ದ ಮತ್ತೊಂದು ಚಿರತೆ
Next articleಸರ್ಕಾರದ ಸ್ವಾಧೀನದಿಂದ ದೇಗುಲ ಮುಕ್ತಗೊಳಿಸಿ