ತಾವರೆಕೆರೆಯಲ್ಲಿ ತಾಲಿಬಾನ್ ಮಾದರಿ ಪ್ರಕರಣ: ಆಯೋಗದಿಂದ ಸುಮೋಟೋ ಕೇಸ್

0
28

ದಾವಣಗೆರೆ: ಚನ್ನಗಿರಿ ತಾಲೂಕಿನ ತಾವರೆಕೆರೆಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮಹಿಳೆಯರನ್ನು ಅಮಾನುಷವಾಗಿ ಥಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಮಹಿಳಾ ಆಯೋಗದಿಂದ ಸುಮೋಟೋ ಕೇಸ್ ದಾಖಲಿಸಲಾಗಿದೆ ಎಂದು ಆಯೋಗದ ಸದಸ್ಯೆ ಡಾ. ಅರ್ಚನಾ ಮಜುಂದಾರ್ ತಿಳಿಸಿದರು.
ನಗರದ ಜಿಲ್ಲಾಸ್ಪತ್ರೆಯ ಆವರಣದಲ್ಲಿರುವ ಸಖಿ ಒನ್ ಸ್ಟಾಪ್ ಸೆಂಟರ್‌ಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾರ್ವಜನಿಕ ಸ್ಥಳದಲ್ಲಿ ಮಹಿಳೆಯೊಬ್ಬಳನ್ನು 12ರಿಂದ 14 ಜನ ಮೌಲ್ವಿಗಳು ಕೋಲು, ವಿದ್ಯುತ್ ಕೇಬಲ್, ಕಲ್ಲಿನಿಂದ ಹಲ್ಲೆ ನಡೆಸುತ್ತಿರುವ ವಿಡಿಯೋ ತುಣಕು ಜಾಲತಾಣದಲ್ಲಿ ಹರದಾಡಿತ್ತು. ಇದರ ಆಧಾರದ ಮೇಲೆ ಆಯೋಗ ಸುಮುಟೋ ದೂರು ದಾಖಲಿಸಿಕೊಂಡು, ಎಸ್ಪಿಗೆ ಕ್ರಮಕ್ಕೆ ಸೂಚಿಸಲಾಗಿತ್ತು. ಎಸ್ಪಿಯವರು ತನಿಖೆ ನಡೆಸಿ 8 ಜನ ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನಷ್ಟು ಜನರನ್ನು ಬಂಧಿಸಬೇಕಾಗಿದೆ ಎಂದು ತಿಳಿಸಿದರು.
ಘಟನೆ ಹಿನ್ನೆಲೆ ಸ್ಥಳಕ್ಕೆ ಭೇಟಿ ನೀಡಿದಾಗ 600ರಿಂದ 700 ಮಹಿಳೆಯರು ಸೇರಿದ್ದರು. ಸರ್ಕಾರದ ಯೋಜನೆ ಸೌಲಭ್ಯ ಪಡೆದು ಸ್ವಾವಲಂಬಿಯಾಗುವಂತೆ ಹಾಗೂ ಮಕ್ಕಳನ್ನು ಮದರಸಕ್ಕೆ ಕಳುಹಿಸುವ ಬದಲು ಶಾಲಾ ಶಿಕ್ಷಣ ಕೊಡಿಸವಂತೆ ಮನವರಿಕೆ ಮಾಡಿಕೊಡಲಾಗಿದೆ ಎಂದು ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದರು.

Previous articleಉಗ್ರರನ್ನು ಜೀವಂತ ಸುಟ್ಟುಹಾಕಿ: ಟಿಪ್ಪು ವಂಶಸ್ಥ
Next articleಕರ್ನಾಟಕದಲ್ಲಿ ಬಾಲ ಗರ್ಭಿಣಿಯರ ಸಂಖ್ಯೆ ಹೆಚ್ಚಳ