ತಾಯಿ-ಮಗ ಇಬ್ಬರು ನಾಪತ್ತೆ

ದಾವಣಗೆರೆ: ತಾಯಿ ಮತ್ತು ಮಗ ಏಕಕಾಲಕ್ಕೆ ನಾಪತ್ತೆಯಾಗಿರುವ ಬಗ್ಗೆ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಾವಣಗೆರೆಯ ಎಸ್‌ಪಿಎಸ್ ನಗರದ ಎರಡನೇ ಹಂತದ ಎ ಬ್ಲಾಕ್ ನಿವಾಸಿ ಶಾಂತ ಕುಮಾರ್ ಅವರ ಪತ್ನಿ ಸುಶೀಲ(39) ಹಾಗೂ 14 ವರ್ಷದ ಪುತ್ರ ನಿಹಾರ್ ನಾಪತ್ತೆಯಾದವರು. ಕಳೆದ ಏ. 14 ರಂದು ಚಿಗಟೇರಿ ಜಿಲ್ಲಾ ಆಸ್ಪತ್ರೆಯ ಬಳಿ ಇಬ್ಬರೂ ನಾಪತ್ತೆಯಾಗಿದ್ದಾರೆ.