ತಾಯಿ ಕೊಂದು ನೇಣಿಗೆ ಶರಣಾದ ಮಗ

0
8
ಆತ್ಮಹತ್ಯೆ

ಧಾರವಾಡ : ಧಾರವಾಡ ಹೊಸಯಲ್ಲಾಪೂರದ ಉಡುಪಿ ಓಣಿಯಲ್ಲಿ ತಾಯಿ ಕೊಂದು ಅತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ.
ಶಾರದಾ ಭಜಂತ್ರಿ (60) ಕೊಲೆಯಾದ ದುರ್ದೈವಿ ರಾಜೇಂದ್ರ ಭಜಂತ್ರಿ (40) ಕೊಲೆ ಮಾಡಿದ ವ್ಯಕ್ತಿ ಎಂದು ಗುರುತಿಸಲಾಗಿದೆ. ರಾಡ್‌ನಿಂದ ಹೊಡೆದು ತಾಯಿ ಕೊಲೆ ಮಾಡಿ ಬಳಿಕ ಮನೆಯಲ್ಲಿಯೇ ತಾನು ನೇಣಿಗೆ ಶರಣಾಗಿದ್ದಾನೆ, ಮಾನಸಿಕವಾಗಿ ತೊಂದರೆ ಅನುಭವಿಸುತ್ತಿದ್ದ ರಾಜೇಂದ್ರ, ಹಣಕ್ಕಾಗಿ ತಾಯಿ ಪೀಡಿಸುತ್ತಿದ್ದ ಎನ್ನಲಾಗುತ್ತಿದೆ, ತಾಯಿಗೆ ಬರುತ್ತಿದ್ದ ಪಿಂಚಣಿ ಮೇಲೆ ಮಗನ ಕಣ್ಣು ಇದ್ದು ಖಾಲಿ ಜಾಗ ತನಗೆ ಕೊಡುವಂತೆ ಹಾಗೂ ಅಲ್ಲಿ ಮನೆ ಕಟ್ಟಿಸಿಕೊಳ್ಳೋದಾಗಿ ದುಂಬಾಲು ಬಿದ್ದಿದ್ದಾನೆ. ಆದರೆ ರಾಜೇಂದ್ರನಿಗೆ ತಾಯಿ ಜಾಗ ಕೊಡಲು ನಿರಾಕರಿಸಿದ್ದಕ್ಕೆ ಈ ಜಗಳ ಸಂಭವಿಸಿದೆ ಎನ್ನಲಾಗುತ್ತಿದೆ, ಸ್ಥಳಕ್ಕೆ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Previous articleಕಲಬುರಗಿ ಜನತೆಗೆ ಮತ್ತೊಂದು ಸಿಹಿ ಸುದ್ಧಿ
Next articleಬ್ರದರ್ ಮಾಡಿಲ್ಲ ಎಂದಿದ್ದರು…