ತಲೆ ಕೆಳಗಾಗಿಸಿ ಡೈವ್: ಯುವಕ ಸಾವು

0
18

ಮಂಗಳೂರು: ಸ್ನೇಹಿತರೊಂದಿಗೆ ಚಿಕ್ಕಮಗಳೂರಿಗೆ ಪ್ರವಾಸ ಹೋಗಿದ್ದ ವೇಳೆ ಕೊಡಗಿನ ಕುಶಾಲನಗರ ಮೂಲದ ಯುವಕನೊಬ್ಬ ಈಜುಕೊಳದಲ್ಲಿ ತಲೆ ಕೆಳಗಾಗಿಸಿ ಡೈವ್ ಮಾಡಿದ್ದು ಈ ವೇಳೆ ತಲೆಗೆ ತೀವ್ರ ಪೆಟ್ಟು ಬಿದ್ದು ಮಂಗಳೂರಿನ ಆಸ್ಪತ್ರೆಗೆ ದಾಖಲಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟ ಘಟನೆ ಇಂದು ನಡೆದಿದೆ.
ಕುಶಾಲನಗರದ ಮೊಬೈಲ್ ಗ್ಯಾಲರಿ ಶಾಪ್ ಮಾಲೀಕ ನಿಶಾಂತ್ (೩೨) ಮೃತ ಯುವಕ. ಈಜಾಟಕ್ಕಾಗಿ ಈಜುಕೊಳದ ಯುವಕ ಮೇಲಿನಿಂದ ತಲೆ ಕೆಳಗಾಗಿಸಿ ಹಾರಿದ್ದು ಈ ಸಂದರ್ಭ ತಲೆಗೆ ತಳಪಾಯ ಡಿಕ್ಕಿ ಹೊಡೆದು ಈಜುಕೊಳದಲ್ಲೇ ಅಸ್ವಸ್ಥರಾಗಿದ್ದಾರೆ. ನೀರಿನಲ್ಲಿ ಅಂಗಾತ ಬಿದ್ದ ಅವರನ್ನು ಕೂಡಲೇ ಸ್ನೇಹಿತರು ಮೇಲಕ್ಕೆತ್ತಿದ್ದು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಸಾವು ಕಂಡಿದ್ದಾರೆ. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ.
ಕೊನೆ ಕ್ಷಣದಲ್ಲಿ ನಿಶಾಂತ್ ನೀರಿಗೆ ಹಾರುವುದು ಮತ್ತು ಕೂಡಲೇ ಸ್ನೇಹಿತರು ಎತ್ತಿ ಆರೈಕೆ ಮಾಡಿರುವುದು ದೃಶ್ಯದಲ್ಲಿ ದಾಖಲಾಗಿದೆ.

Previous articleದುಂಡಾವರ್ತನೆ ಮುಂದುವರೆದರೆ ಒಂದು ವರ್ಷ ಅಮಾನತು
Next articleಮುಖ್ಯಮಂತ್ರಿಯಾದರೆ ಸಾವಿರ ಜೆಸಿಬಿ ಖರೀದಿಸುವೆ