ತಮಿಳುನಾಡು: ತಮಿಳು ಕೇವಲ ಭಾಷೆಯಲ್ಲ, ತಮಿಳುನಾಡಿನ ಜನರಿಗೆ ಸಂಸ್ಕೃತಿ, ಇತಿಹಾಸ ಮತ್ತು ಸ್ವಾಭಿಮಾನದ ಸಂಕೇತವಾಗಿದೆ ಎಂದು ಸಿಎಂ ಎಂ.ಕೆ. ಸ್ಟಾಲಿನ್ ಹೇಳಿದ್ದಾರೆ.
ತಮಿಳುನಾಡು ಸರ್ಕಾರವು ರಾಜ್ಯ ಬಜೆಟ್‌ನ ಅಧಿಕೃತ ಲೋಗೋದಲ್ಲಿ ಭಾರತೀಯ ರೂಪಾಯಿ ಚಿಹ್ನೆಯಾದ ₹ ಬದಲಿಗೆ ತಮಿಳು ಅಕ್ಷರವಾದ ರೂ. ಬಳಸಲು ಅಧಿಕೃತವಾಗಿ ಆದೇಶ ಹೊರಡಿಸಲಾಗಿದೆ. ಚೆನ್ನೈನಿಂದ ದೆಹಲಿಯವರೆಗೆ ‘ರಾಷ್ಟ್ರೀಯ ಶಿಕ್ಷಣ ನೀತಿ’ಯನ್ನು ಜಾರಿಗೆ ತರುವ ಮೂಲಕ ಹಿಂದಿ ಹೇರಿಕೆ ಮಾಡ್ತಿದ್ದಾರೆ. ಇದು ಎನ್‌ಇಪಿ ಶಿಕ್ಷಣ ನೀತಿಯಲ್ಲ, ಅದು ಕೇಸರಿ ನೀತಿ. ಇದರ ಉದ್ದೇಶ ಭಾರತವನ್ನು ಅಭಿವೃದ್ಧಿಪಡಿಸುವುದಲ್ಲ, ಹಿಂದಿಯನ್ನು ಅಭಿವೃದ್ಧಿಪಡಿಸುವುದು. ಶಿಕ್ಷಣ ಕ್ಷೇತ್ರದಲ್ಲಿ ತಮಿಳುನಾಡಿನ ಪ್ರಗತಿ ನಾಶ ಮಾಡುವ NEP ಯನ್ನು ವಿರೋಧಿಸುತ್ತೇವೆ ಎಂದಿದ್ದಾರೆ. ಎನ್‌ಇಪಿ ಸಾಮಾಜಿಕ ನ್ಯಾಯವಾದ ಮೀಸಲಾತಿಯನ್ನು ತಮಿಳುನಾಡು ಸ್ವೀಕರಿಸಲ್ಲ. ಎನ್‌ಇಪಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರ ಹಿಂದುಳಿದ ವರ್ಗಗಳಿಗೆ ಸಹಾಯ ಆಗಲಿದೆ ಅನ್ನೋದೆಲ್ಲ ಸುಳ್ಳು. ಕಳೆದ 10 ವರ್ಷಗಳಿಂದ ಈ ರೀತಿಯ ವಿಚಾರಗಳು ತಮಿಳುನಾಡಿನ ಅಭಿವೃದ್ಧಿ ಮೇಲೆ ಕೆಟ್ಟ ಪರಿಣಾಮ ಬೀರಿದೆ, ನಾಳೆ ಮಂಡನೆಯಾಗುವ ಬಜೆಟ್ ಲಾಂಛನದಲ್ಲಿ ‘ಎಲ್ಲರಿಗೂ ಎಲ್ಲವೂ’ ಎನ್ನುವ ಅಡಿಬರಹ ಇದ್ದು, ಎಲ್ಲರನ್ನೂ ಒಳಗೊಳ್ಳುವುದರ ಸಂಕೇತ ಎಂದು ಡಿಎಂಕೆ ಸರ್ಕಾರ ಹೇಳಿದೆ.