ಚಿಕ್ಕಮಗಳೂರು: ಭಾರಿ ಸಂಚಲನ ಮೂಡಿಸಿದ್ದ ೫ ವರ್ಷದ ಬಾಲಕಿ ಕೊಲೆ ಪ್ರಕರಣವನ್ನು ಅಜ್ಜಂಪುರ ಪೊಲೀಸರು ಪತ್ತೆಹಚ್ಚಿದ್ದು, ತಂದೆಯೇ ಕೊಲೆ ಆರೋಪಿ ಎಂದು ಒಪ್ಪಿಕೊಂಡಿದ್ದಾನೆ.
ಬೆಂಗಳೂರು ಮೂಲದ ಮಂಜುನಾಥ ಎಂಬಾತ ಮಂಗಳ ಎಂಬುವವರನ್ನು ೨೦೧೮ರಲ್ಲಿ ಪ್ರೀತಿಸಿ ಮದುವೆಯಾಗಿದ್ದ. ಹೆಂಡತಿ ನಡವಳಿಕೆ ಮೇಲೆ ಸಂಶಯವಿತ್ತು. ಮಗಳು ವೇದಾ ನನಗೆ ಹುಟ್ಟಿಲ್ಲವೆಂಬ ಅನುಮಾನ ಹೆಚ್ಚಾಗಿತ್ತು. ಈ ವಿಷಯದಲ್ಲಿ ಜಗಳ ನಡೆಯುತ್ತಿತ್ತು. ಮಗಳು ತಂದೆ ವಿರುದ್ಧ ಮಾತನಾಡುತ್ತಿದ್ದು, ಕಳೆದ ಸೆ. ೧೯ರಂದು ಶಿವನಿ ರೈಲ್ವೆ ಸ್ಟೇಷನ್‌ನಲ್ಲಿರುವ ತನ್ನ ಮನೆಗೆ ಬಂದ ತಂದೆ ಮಂಜುನಾಥ ಮಗಳನ್ನು ಏನು ಮಾಡುತ್ತಿದ್ದೀಯಾ ಎಂದು ಕೇಳಿದ್ದಕ್ಕೆ ನೀನು ಯಾರು ಕೇಳುವುದಕ್ಕೆ, ಕುಡಿದು ಬಂದಿದ್ದೀಯಾ ಎಂದಾಗ ಸಿಟ್ಟಿಗೆದ್ದ ತಂದೆ ಕಬ್ಬಿಣ ವಸ್ತುವಿನಿಂದ ತಲೆಗೆ ಹೊಡೆದಾಗ ಮಗಳು ಸಾವಿಗೀಡಾಗಿದ್ದಾಳೆ ಎಂದು ವಿಚಾರಣೆ ವೇಳೆ ತಿಳಿದುಬಂದಿದೆ.