ಪರೀಕ್ಷಾ ಪೆ ಚರ್ಚಾ ನನ್ನ ಪರೀಕ್ಷೆಯೂ ಆಗಿದೆ, ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು, ಪರೀಕ್ಷಾ ಪೆ ಚರ್ಚಾ 2023 ರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಈ ಪರೀಕ್ಷೆಯನ್ನು ಎದುರಿಸುವುದು ನನ್ನ ಸೌಭಾಗ್ಯ ಮತ್ತು ನನಗೆ ಸಂತೋಷ ನೀಡುತ್ತದೆ. ನಮ್ಮ ಯುವ ವಿದ್ಯಾರ್ಥಿಗಳ ಆಕಾಂಕ್ಷೆಗಳು, ಸವಾಲುಗಳು, ಕನಸುಗಳು ಮತ್ತು ದೃಷ್ಟಿಕೋನಗಳನ್ನು ಅರ್ಥಮಾಡಿಕೊಳ್ಳುವುದು ನನ್ನ ಸುಯೋಗವಾಗಿದೆ ಎಂದರು, ನೀವೆಲ್ಲರೂ ನೀವು ಬಳಸುವ ಗ್ಯಾಜೆಟ್ ಗಳಿಗಿಂತಲೂ ಹೆಚ್ಚು ಸ್ಮಾರ್ಟ್ ಆಗಿದ್ದೀರಿ. ತಂತ್ರಜ್ಞಾನದ ದಾಸರಾಗಬೇಡಿ. ನ್ಯಾಯೋಚಿತವಾಗಿ ಅದನ್ನು ಬಳಸಿ ಎಂದರು.