ಡೆಫ್ ಅಂತಾರಾಷ್ಟ್ರೀಯ ಚೆಸ್ ಪಂದ್ಯಾವಳಿ: ಧಾರವಾಡದ ಅಂಬಿಕಾ, ಹುಬ್ಬಳ್ಳಿಯ ಕಿಶನ್‌ ಸಾಧನೆ

0
27

ಹುಬ್ಬಳ್ಳಿ: ಮಲೇಷ್ಯದ ಕೌಲಾಲಂಪುರದಲ್ಲಿ ಡಿ. ೨ರಿಂದ ೮ರವರೆಗೆ ನಡೆದ ಏಷ್ಯ ಪೆಸಿಫಿಕ್ ಡೆಫ್ ಅಂತಾರಾಷ್ಟ್ರೀಯ ಚೆಸ್ ಪಂದ್ಯಾವಳಿಯಲ್ಲಿ ಧಾರವಾಡದ ಅಂಬಿಕಾ ಮಸಗಿ ಬೆಳ್ಳಿ ಹಾಗೂ ಕಂಚಿನ ಪದಕ ಹಾಗೂ ಹುಬ್ಬಳ್ಳಿಯ ಕಿಶನ್ ಹುಲಿಹಳ್ಳಿ ಭಾಗವಹಿಸಿ ಸಾಧನೆ ಮಾಡಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಧಾರವಾಡದ ಅಂಬಿಕಾ ಮಸಗಿ ಅವರ ತಾಯಿ ಜಯಶ್ರೀ ಮಸಗಿ, ಅಂಬಿಕಾ ಮಲೇಷ್ಯದಲ್ಲಿ ನಡೆದ ಮಹಿಳೆಯರ ಚೆಸ್ ವಿಭಾಗದಲ್ಲಿ ವೈಯಕ್ತಿಕವಾಗಿ ಎರಡನೇ ಸ್ಥಾನದೊಂದಿಗೆ ಬೆಳ್ಳಿ, ರ‍್ಯಾಪಿಡ್ ವಿಭಾಗದಲ್ಲಿ ಕಂಚು ಪದಕ ಪಡೆದು ಸಾಧನೆ ಮಾಡಿದ್ದಾರೆ. ಬಿ.ಇ ಎಂಜಿನಿಯರಿಂಗ್ ಪದವಿಧರೆಯಾಗಿರುವ ಅಂಬಿಕಾಗೆ ಅವಳ ನೂನ್ಯತೆಗಳನ್ನು ಇಟ್ಟುಕೊಂಡು ಯಾರು ಕೆಲಸ ಕೊಡುತ್ತಿಲ್ಲ. ಹೀಗಾಗಿ ಕೆಲಸ ನೀಡಬೇಕು ಎಂದು ಮನವಿ ಮಾಡಿದರು.
ಕಿಶನ್ ಹುಲಿಹಳ್ಳಿ ಅವರ ತಂದೆ ಶಿವಪ್ಪ ಹುಲಿಹಳ್ಳಿ ಅವರು ಮಾತನಾಡಿ, ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದ ಡೆಫ್ ರಾಷ್ಟ್ರೀಯ ಚೆಸ್ ಆಯ್ಕೆಯ ಟ್ರಯಲ್‌ನಲ್ಲಿ ಕಿಶನ್ ನಾಲ್ಕನೇ ಸ್ಥಾನಗಳಿಸಿ ಅಂತಾರಾಷ್ಟ್ರೀಯ ಚೆಸ್‌ಗೆ ಆಯ್ಕೆಯಾಗಿದ್ದಾನೆ. ದೆಹಲಿಯ ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ ಸಂಸ್ಥೆಯಲ್ಲಿ ತರಬೇತಿ ಪಡೆದು ಮಲೇಶಿಯಾದ ಕೌಲಾಲಂಪುರದಲ್ಲಿ ಅಂತಾರಾಷ್ಟ್ರೀಯ ಡೆಫ್ ಏಷ್ಯ ಪೆಸಿಫಿಕ್ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದೆವು. ವೈಯಕ್ತಿಕ ೧೧, ರಾಪಿಡ್ ೬, ಕ್ಲಾಸಿಕಲ್‌ನಲ್ಲಿ ೭ ರೌಂಡ್ ಆಡಿದ್ದಾನೆ ಎಂದರು.
ಕಿಶನ್ ಮಾತನಾಡಿ, ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದೆ. ಮಲೇಶಿಯಾದಲ್ಲಿ ಕ್ಲಾಸಿಕಲ್‌ನಲ್ಲಿ ಎರಡು ಸುತ್ತಿನಲ್ಲಿ ಮಲೇಶಿಯಾ ಮತ್ತು ಓಮನ್ ಆಟಗಾರರ ವಿರುದ್ಧ ಜಯ ಸಾಧಿಸಿದ್ದು, ಸಂತೋಷ ನೀಡಿದೆ. ದೇಶಕ್ಕಾಗಿ ಆಡಿ ಬಂಗಾರದ ಪದಕ ಗೆಲ್ಲುವ ಗುರಿ ಹೊಂದಿದ್ದೇನೆ ಎಂದರು.
ಆಲ್‌ ಇಂಡಿಯಾ ಡೆಫ್‌ ಚೆಸ್‌ ಅಸೋಸಿಯೇಶನ್‌ ಮತ್ತು ಕರ್ನಾಟಕ ಡೆಫ್ ಅಂತಾರಾಷ್ಟ್ರೀಯ ಚೆಸ್ ಪಂದ್ಯಾವಳಿ: ಧಾರವಾಡದ ಅಂಬಿಕಾ, ಹುಬ್ಬಳ್ಳಿಯ ಕಿಶನ್‌ ಸಾಧನೆ ಚೆಸ್‌ ಅಸೋಸಿಯೇಶನ್‌ ಹಾಗೂ ಸಾಯಿ ಸ್ಫೋರ್ಟ್ಸ್‌ ಅಥಾರಿಟಿ ಆಫ್‌ ಇಂಡಿಯಾ ಪ್ರೋತ್ಸಾಹದಿಂದ ಈ ಸಾಧನೆ ಸಾಧ್ಯವಾಗಿದ್ದು, ಕೃತಜ್ಞತೆ ಸಲ್ಲಿಸುತ್ತೇವೆ ಎಂದು ಉಭಯ ಆಟಗಾರರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕಿಶನ್ ಹುಲಿಹಳ್ಳಿ ಅವರ ತಾಯಿ ರೇಣುಕಾ ಹುಲಿಹಳ್ಳಿ, ಪದಕ ವಿಜೇತೆ ಅಂಬಿಕಾ ಮಸಗಿ ಪತ್ರಿಕಾಗೋಷ್ಠಿಯಲ್ಲಿದ್ದರು.

Previous articleನಟ ಅಲ್ಲು ಅರ್ಜುನ್​ಗೆ ಜಾಮೀನು
Next articleಕೊಚ್ಚಿಹೋದ ಹನುಮಮಾಲಾಧಾರಿ ಶವ ಪತ್ತೆ