ಹುಬ್ಬಳ್ಳಿ: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಸಿಎಂ ಆಗುತ್ತಾರೆ. ನಾಳೇನೆ ಆ ಕಾಲ ಬರಬಹುದು. ಇದೇ ಅವಧಿಯಲ್ಲಿ ಸಿಎಂ ಆಗುತ್ತಾರೆ ಎಂದು ಭೈರವಿ ಅಮ್ಮ ಭವಿಷ್ಯ ನುಡಿದಿದ್ದಾರೆ.
ಗುರುವಾರ ಸಿದ್ಧಾರೂಢಸ್ವಾಮಿ ಮಠದಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಾ ಭವಿಷ್ಯ ನುಡಿದ ಬೈರವಿ ಅಮ್ಮ ಅವರು, ನನ್ನ ಮಾತು ಯಾವತ್ತೂ ಸುಳ್ಳ ಆಗಲ್ಲ. ಇಲ್ಲಿಯ ತನಕ ಸುಳ್ಳು ಆಗಿಲ್ಲ, ಮುಂದೆಯೂ ಸುಳ್ಳು ಆಗೋದೂ ಇಲ್ಲ ಎಂದರು.