ಬೆಳಗಾವಿ: ಬೆಳಗಾವಿ ಡಿಸಿಸಿ ಬ್ಯಾಂಕ್‌ನ ಅಧ್ಯಕ್ಷ ಸ್ಥಾನಕ್ಕೆ ರಮೇಶ್ ಕತ್ತಿ ರಾಜೀನಾಮೆ ನೀಡಿದ್ದಾರೆ.
ರಮೇಶ ಕತ್ತಿ ಅವರ ವಿರುದ್ಧ 14 ನಿರ್ದೇಶಕರು ಅವಿಶ್ವಾಸ ನಿರ್ಣಯಕ್ಕೆ ಮುಂದಾಗಿದ್ದರು, ಅವಿಶ್ವಾಸ ನಿರ್ಣಯದ ಸೂಕ್ಷ್ಮತೆ ಅರಿತು ಎಚ್ಚೆತ್ತುಕೊಂಡಿರುವ, ರಮೇಶ್ ಕತ್ತಿ ಸ್ವಯಂ ರಾಜೀನಾಮೆ ಪತ್ರ ಸಲ್ಲಿಕೆ ಮಾಡಿದ್ದಾರೆ. ಬ್ಯಾಂಕ್‌ನ 17 ನಿರ್ದೇಶಕರ ಪೈಕಿ 15 ನಿರ್ದೇಶಕರು ರಮೇಶ್ ಕತ್ತಿ ವಿರುದ್ಧ ನಿಂತಿದ್ದು, ಈ ಹಿನ್ನೆಲೆಯಲ್ಲಿ ರಮೇಶ್ ಕತ್ತಿ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ. ಬಾಲಚಂದ್ರ ಜಾರಕಿಹೊಳಿಗೆ ಒಟ್ಟು 14 ನಿರ್ದೇಶಕರು ಬೆಂಬಲ ನೀಡಿದ್ದು, ಶೀಘ್ರದಲ್ಲೇ ಮಹತ್ವದ ಸುದ್ದಿಗೋಷ್ಠಿ ನಡೆಸುವ ಸಾಧ್ಯತೆ ಇದೆ.