ಟ್ರ್ಯಾಕ್ಟರ್ ಹಾಯ್ದು ವಿದ್ಯಾರ್ಥಿನಿ ಸಾವು

0
10

ಶಾಲೆಗೆಂದು ಮನೆಯಿಂದ ತೆರಳುತ್ತಿದ್ದ ವಿದ್ಯಾರ್ಥಿನಿಯೋರ್ವಳ ಮೇಲೆ ಟ್ರ್ಯಾಕ್ಟರ್ ಹಾಯ್ದ ಪರಿಣಾಮ ಶಾಲಾ ವಿದ್ಯಾರ್ಥಿನಿ ಸಾವನ್ನಪ್ಪಿದ ಘಟನೆ ಬನಹಟ್ಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಂಗಳವಾರ ನಡೆದಿದೆ.
ಸಮೀಪದ ಯಲ್ಲಟ್ಟಿ ಗ್ರಾಮದಲ್ಲಿರುವ ರಾಣಿ ಚನ್ನಮ್ಮ ವೃತ್ತದ ಬಳಿ ದೈನಂದಿನವಾಗಿ ಬೆಳಿಗ್ಗೆ 9:30 ರ ಸುಮಾರಿಗೆ ತನ್ನ ಶಾಲೆಗೆ ಸೈಕಲ್ ಮೇಲೆ ತೆರಳುತ್ತಿರುವ ಸಂದರ್ಭ ಖಾಲಿ ಡಬ್ಬಿಯ ಟ್ರ್ಯಾಕ್ಟರ್‌ನ ಚಾಲಕನ ನಿರ್ಲಕ್ಷ್ಯದಿಂದ ವಿದ್ಯಾರ್ಥಿನಿ ಸಂಸ್ಕೃತಿ ಭಜಂತ್ರಿ(13) ಟ್ರ್ಯಾಕ್ಟರ್‌ನ ಮುಂಭಾಗದಲ್ಲಿ ವೇಗವಾಗಿ ಹಾಯ್ದ ಪರಿಣಾಮ ತಲೆಗೆ ಭಾರಿ ಪೆಟ್ಟಾಗಿದೆ.
ಚಿಕಿತ್ಸೆಗೆಂದು ಜಮಖಂಡಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗಿದೆ ಸಾವನ್ನಪ್ಪಿರುವ ಘಟನೆಯಾಗಿದೆ. ಘಟನೆ ಸಂಭವಿಸಿದ ಕ್ಷಣದಲ್ಲಿಯೇ ಸ್ವತಃ ಟ್ರ್ಯಾಕ್ಟರ್ ಚಾಲಕ ಬಾಲಕಿಯನ್ನು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಒದಗಿಸಿದ್ದಾನೆ. ಆದಾಗ್ಯೂ ತೀವ್ರ ರಕ್ತಸ್ರಾವದಿಂದ ಸಾವುಗೀಡಾಗಲು ಕಾರಣವಾಗಿದೆ. ಈ ಕುರಿತು ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಿಎಸ್‌ಐ ಶಾಂತಾ ಹಳ್ಳಿ ತನಿಖೆ ಮುಂದುವರೆಸಿದ್ದಾರೆ.

Previous articleಪ್ರತಿಪಕ್ಷಗಳ ಸಂಸದರ ಅಮಾನತು ಹಿಂಪಡೆಯಲು ಮನವಿ
Next articleಹನುಮ ಧ್ವಜ ತೆರವು ಬೆನ್ನಲ್ಲೇ ಭಟ್ಕಳದಲ್ಲಿ ಭಗವಾಧ್ವಜ ತೆರವು