ಟ್ರ್ಯಾಕ್ಟರ್​ಗೆ ಬಸ್​ ಡಿಕ್ಕಿ: 4 ಭಕ್ತರ ಸಾವು!

0
8

ಕೊಪ್ಪಳ: ಹೊಸಳ್ಳಿ ಗ್ರಾಮದ ಬಳಿ ಶುಕ್ರವಾರ ತಡ ರಾತ್ರಿ ಬಸ್ ಮತ್ತು ಟ್ರ್ಯಾಕ್ಟರ್ ನಡುವೆ ಸಂಭವಿಸಿದ ಅಪಘಾತದಲ್ಲಿ ನಾಲ್ಕು ಭಕ್ತರು ಮೃತಪಟ್ಟಿದ್ದಾರೆ.
ಮೃತರು ಯಲಬರ್ಗಾ ತಾಲೂಕಿನ ಕರಮುಡಿ ಗ್ರಾಮದ ನಿವಾಸಿಗಳು ಎಂದು ತಿಳಿದು ಬಂದಿದ್ದು, ಬಸವರಾಜ (22), ಮುತ್ತಪ್ಪ (22), ಗದಗ ಜಿಲ್ಲೆಯ ತಿಮ್ಮಾಪುರ ಗ್ರಾಮದ ನಿವಾಸಿ ಕೊಂಡಪ್ಪ (60), ದುರುಗಮ್ಮ ಹನುಮಪ್ಪ (65) ಎಂದು ಗುರುತಿಸಲಾಗಿದೆ.
ಶುಕ್ರವಾರ ರಾತ್ರಿ 30 ಕ್ಕೂ ಹೆಚ್ಚು ಮಂದಿ ದೇವಿ ದರ್ಶನ ಮುಗಿಸಿಕೊಂಡು ಟ್ರ್ಯಾಕ್ಟರ್ ನಲ್ಲಿ ಮರಳಿ ತಮ್ಮೂರಿಗೆ ಹೋಗುತ್ತಿದ್ದರು‌. ಈ ವೇಳೆ ಹಿಂದಿನಿಂದ ಬಂದು ಖಾಸಗಿ ಡಿಕ್ಕಿ ಹೊಡೆದಿದ್ದರಿಂದ 3 ಸ್ಥಳದಲ್ಲಿಯೇ ಮೃತಪಟ್ಟು ಹದಿನೈದಕ್ಕೂ ಹೆಚ್ಚು ಜನರಿಗೆ ಗಾಯವಾಗಿದೆ. ಗಾಯಾಳುಗಳು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಮುನಿರಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Previous articleಅಂಜಲಿ ಕುಟುಂಬಕ್ಕೆ ಸಂತೋಷ್‌ ಲಾಡ್‌ ಭೇಟಿ‌
Next articleಅಂಜಲಿ ಹಂತಕನ ಮೇಲೆ ಮತ್ತೊಂದು ಪ್ರಕರಣ