ಚಿಕ್ಕಮಗಳೂರು: ಟ್ರೆಕ್ಕಿಂಗ್‌ಗೆ ಎಂದು ಬಂದಿದ್ದ ಯುವಕನೋರ್ವ ನಾಪತ್ತೆಯಾಗಿರುವ ಘಟನೆ ನಡೆದಿದೆ.
ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ದುರ್ಗದಹಳ್ಳಿ ರಾಣಿಝರಿ ಬಳಿಯಿಂದ ಬೆಂಗಳೂರು ಮೂಲದ ಯುವಕನೋರ್ವ ನಾಪತ್ತೆಯಾಗಿದ್ದಾನೆ. ದುರ್ಗದಹಳ್ಳಿಯ ಗುಡ್ಡದಲ್ಲಿರೋ ರಾಣಿಝರಿ ಪಾಯಿಂಟ್ ಪ್ರವಾಸಿ ತಾಣಕ್ಕೆ ಬೆಂಗಳೂರು ಮೂಲದ ಭರತ್ ಟ್ರಕ್ಕಿಂಗ್ ಬಂದಿದ್ದಾರೆ. ರಾಣಿಝರಿ ಪಾಯಿಂಟ್ ನಲ್ಲಿ ಭರತ್ ಬೈಕ್ ನಿಲ್ಲಿಸಿದ್ದಾರೆ. ಗುಡ್ಡದ ತುದಿಯಲ್ಲಿ ಟೀ ಶರ್ಟ್, ಸ್ಲಿಪ್ಪರ್ ಪತ್ತೆಯಾಗಿವೆ.