Home ಅಪರಾಧ ಟೆಂಪೋ-ಲಾರಿ ಡಿಕ್ಕಿ: ಓರ್ವ ಸಾವು

ಟೆಂಪೋ-ಲಾರಿ ಡಿಕ್ಕಿ: ಓರ್ವ ಸಾವು

0
136

ಉಳ್ಳಾಲ: ಮಾರ್ಗ ಮಧ್ಯೆ ಕೆಟ್ಟು ನಿಂತ ಕೆಎಸ್‌ಆರ್‌ಟಿಸಿ ಬಸ್‌ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸುವ ಧಾವಂತದಲ್ಲಿ ಟೆಂಪೋ ಚಾಲಕ ನಿಯಂತ್ರಣ ಕಳೆದುಕೊಂಡು ಬಸ್‌ನಿಂದ ಕೆಳಗಿಳಿಯುತ್ತಿದ್ದ ಪ್ರಯಾಣಿಕರೊಬ್ಬರಿಗೆ ಡಿಕ್ಕಿ ಹೊಡೆದಿದ್ದು ಅವರು ಸ್ಥಳದಲ್ಲೇ ಮೃತಪಟ್ಟ ಘಟನೆ ಕಲ್ಲಾಪು ಆಡಂಕುದ್ರು ರಾ.ಹೆ 66ರಲ್ಲಿ ಸಂಭವಿಸಿದೆ.
ಬಂಟ್ವಾಳ ಮೂಲದ ಆದಂ(64) ಮೃತಪಟ್ಟವರೆಂದು ಗುರುತಿಸಲಾಗಿದೆ. ಬಳಿಕ ಟೆಂಪೋ ರಸ್ತೆ ಬದಿ ನಿಲ್ಲಿಸಲಾಗಿದ್ದ ಕಾರಿಗೆ ಡಿಕ್ಕಿ ಹೊಡೆದು ಬಳಿಕ ಅಂಗಡಿಯೊಂದರ ನಾಮಫಲಕಗಳಿಗೆ ಗುದ್ದಿ ಕಂದಕಕ್ಕೆ ಉರುಳಿದೆ. ಈ ಕುರಿತಂತೆ ಮಂಗಳೂರು ದಕ್ಷಿಣ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.