ಜೆಡಿಎಸ್‌ ಸೇರಿದ ಕಾಂಗ್ರೆಸ್‌ ಮಾಜಿ ಶಾಸಕ ಎಚ್‌ ನಿಂಗಪ್ಪ

0
13

ಬೆಂಗಳೂರು: ಕಾಂಗ್ರೆಸ್‌ನ ಮಾಜಿ ಶಾಸಕ ಎಚ್‌ ನಿಂಗಪ್ಪ ಮಂಗಳವಾರ ಜೆಡಿಎಸ್‌ ಸೇರಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಪೋಸ್ಟ್‌ ಮಾಡಿದ್ದು ಮಾಜಿ ಶಾಸಕ ಹೆಚ್.ನಿಂಗಪ್ಪ ಅವರನ್ನು ಜನತಾದಳ ರಾಜ್ಯ ಕಚೇರಿ ಜೆ.ಪಿ.ಭವನದಲ್ಲಿ ಪಕ್ಷಕ್ಕೆ ಅತ್ಯಂತ ಸಂತೋಷದಿಂದ ಬರಮಾಡಿಕೊಳ್ಳಲಾಯಿತು. ಅವರ ಸೇರ್ಪಡೆಯಿಂದ ತುಮಕೂರು ಜಿಲ್ಲೆಯಲ್ಲಿ ಪಕ್ಷಕ್ಕೆ ಮತ್ತಷ್ಟು ಶಕ್ತಿ ಬಂದಂತೆ ಆಗಿದೆ.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಕೆ.ಎ.ತಿಪ್ಪೇಸ್ವಾಮಿ, ಮಾಜಿ ಶಾಸಕ ತಿಮ್ಮರಾಯಪ್ಪ, ತುಮಕೂರು ಜೆಡಿಎಸ್ ಅಧ್ಯಕ್ಷ ಆಂಜಿನಪ್ಪ, ಜೆಡಿಎಸ್ ಬೆಂಗಳೂರು ನಗರ ಘಟಕದ ಅಧ್ಯಕ್ಷ ಹೆಚ್.ಎಂ.ರಮೇಶ್ ಗೌಡ ಮುಂತಾದವರು ಹಾಜರಿದ್ದರು ಎಂದಿದ್ದಾರೆ.ಸೋಮವಾರವಷ್ಟೇ ಕಾಂಗ್ರೆಸ್‌ ಪಕ್ಷಕ್ಕೆ ರಾಜೀನಾಮೆ ನೀಡಿದ್ದ ನಿಂಗಪ್ಪ ಇಂದು ಜೆಡಿಎಸ್‌ಗೆ ಸೇರಿದ್ದಾರೆ.

Previous articleಬಿಜೆಪಿ ಸೇರದಿದ್ದರೆ ಒಂದು ತಿಂಗಳಲ್ಲೇ ನಮ್ಮ ಬಂಧನ
Next articleಆತ್ಮಹತ್ಯೆಗೆ ಯತ್ನಿಸಿದ ಚುನಾವಣಾ ಸಿಬ್ಬಂದಿಯ ಆರೋಗ್ಯ ಸ್ಥಿರ