ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿ ನೇಣಿಗೆ ಶರಣು

0
22

ಹಾವೇರಿ: ಜಿಲ್ಲಾಕಾರಾಗೃಹದಲ್ಲಿ ವಿಚಾರಣಾಧೀನ ಕೈದಿ ನೇಣಿಗೆ ಶರಣಾದ ಘಟನೆ ನಡೆದಿದೆ.
ಹಾವೇರಿಯ ಕೆರೆಮತ್ತಿಹಳ್ಳಿ ಬಳಿ ಇರುವ ಜಿಲ್ಲಾಕಾರಾಗೃಹದಲ್ಲಿ ಈ ಘಟನೆ ನಡೆದಿದೆ. 2019ರಲ್ಲಿ ಡಬಲ್ ಮರ್ಡರ್ ಕೇಸ್‌ನಲ್ಲಿ ಆರೋಪಿಯಾಗಿದ್ದ ವಿಚಾರಣಾಧೀನ ಕೈದಿ ಕೋಟ್ಯಪ್ಪ ಅಂಬಿಗೇರ (42) ನೇಣಿಗೆ ಶರಣಾದ ಖೈದಿ. ಹಾವೇರಿ ಗ್ರಾಮೀಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಶವಗಾರದ ಮುಂದೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮೃತ ಕೋಟೆಪ್ಪ ಅಂಬಿಗೇರ್​​ ಸುಮಾರು ಆರುವರೆ ವರ್ಷಗಳ ಹಿಂದೆ ಡಬ್ಬಲ್ ಮರ್ಡರ್ ಮಾಡಿ ಜೈಲು ಪಾಲಾಗಿದ್ದರು. ಹೃದಯ ಸಂಬಂಧಿ ಕಾಯಿಲೆ ಇತ್ತು. ನ್ಯಾಯಾಲಯದಿಂದ ಬೆಲ್ ಸಿಕ್ಕಿರಲಿಲ್ಲ.

Previous articleಅವರ ಹಬ್ಬಕ್ಕೆ ಅವರೇ ಬರದಿದ್ದರೆ ಹೇಗೆ..?
Next articleವಿಜೃಂಭಣೆಯಿಂದ ಜರುಗಿದ ಹೊರನಾಡಿನ ಅನ್ನಪೂರ್ಣೇಶ್ವರಿ ರಥೋತ್ಸವ