ಕೊಪ್ಪಳ: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಿಭೂತಿ ಗುಂಡಪ್ಪ ಹಾಜರಿದ್ದರು. ಆದರೆ ಅಧಿಕಾರಿಗಳು ಅವರನ್ನು ಕೇಶಪ್ಪ ಶಿಳ್ಳೆಕ್ಯಾತರ್ ಎಂದು ಸಂಭೋದಿಸಿ ಸ್ವಾಗತಿಸಿರುವುದು ಮುಜುಗರ ತರಿಸಿತು.
ನಗರದ ವಿವಿಧೋದ್ದೇಶ ಒಳಗಂಣ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಶ್ರಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕ್ರೀಡಾ ಇಲಾಖೆಯ ಅಧಿಕಾರಿಗಳು ಎಡವಟ್ಟು ಮಾಡಿದರು.
ಯುವಜನರಿಲ್ಲ, ಕೇವಲ ಮಕ್ಕಳಿದ್ದರು: ಯುವಕರಿಗಾಗಿ ಜಿಲ್ಲಾ ಮಟ್ಟದ ಯುವ ಜನೋತ್ಸವದಲ್ಲಿ ಯುವ ಜನರಿರಲಿಲ್ಲ. ಬದಲಿಗೆ ಮಕ್ಕಳು, ಬಾಲಕ-ಬಾಲಕಿಯರು ಮಾತ್ರ ಹಾಜರಿದ್ದರು. ಈ ನಿಟ್ಟಿನಲ್ಲಿ ಯುವ ಜನರನ್ನು ತಲುಪುವಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವಿಫಲವಾಗಿದೆ ಎಂಬಂತೆ ಭಾಸವಾಯಿತು.