ಜಿಲ್ಲಾಧಿಕಾರಿಗಳಿಂದ ಚೆಕ್‌ಪೋಸ್ಟ್ ಪರಿಶೀಲನೆ

0
14

ಶ್ರೀರಂಗಪಟ್ಟಣ: ಲೋಕಸಭಾ ಚುನಾವಣಾ ಹಿನ್ನೆಲೆ ಜಿಲ್ಲಾಧಿಕಾರಿ ಡಾ. ಕುಮಾರ ತಾಲೂಕಿನ ಗಡಿ ಭಾಗದ ವಿವಿದೆಡೆ ತೆರೆಯಲಾಗಿರುವ ಚೆಕ್‌ಪೋಸ್ಟ್‌ಗಳನ್ನು ಪರಿಶೀಲನೆ ನಡೆಸಿದರು.
ತಾಲೂಕಿನ ಕಳಸ್ತಾವಾಡಿ, ಮೊಗರಹಳ್ಳಿ ಮತ್ತು ಪೇಪರ್ ಮಿಲ್ ಚೆಕ್‌ಪೋಸ್ಟ್‌ಗಳಿಗೆ ಭೇಟಿ ನೀಡಿದ ಅವರು, ಇಲ್ಲಿನ ಚೆಕ್‌ಪೋಸ್ಟ್‌ಗಳಲ್ಲಿ ಕರ್ತವ್ಯನಿರತ ಅಧಿಕಾರಿಗಳು, ಮತ್ತು ಸಿಬ್ಬಂದಿಗೆ ಸೂಕ್ತ ಸಲಹೆ ಸೂಚನೆಗಳನ್ನು ನೀಡಿ ಸಮರ್ಪಕ‌ ತಪಾಸಣೆಯಲ್ಲಿ‌‌ ತೊಡಗುವಂತೆ ತಾಕೀತು‌ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಸೇರಿದಂತೆ ತಾಲೂಕು‌ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Previous articleಬಿ.ವಿ ನಾಯಕ್‌ಗೆ ರಾಯಚೂರು ಬಿಜೆಪಿ‌ ಟಿಕೆಟ್ ಮಿಸ್: ಬೆಂಬಲಿಗರ ಆಕ್ರೋಶ
Next articleಅಖಿಲ ಭಾರತ ಶಾಸ್ತ್ರೀಯ ಭಾಷಣ ಸ್ಪರ್ಧೆಯಲ್ಲಿ ಮೈಸೂರಿನ ಕೃಷ್ಣ ಪ್ರಥಮ