ಜಿಪಂ ಸಿಇಒ ಗರಿಮಾ ಪನ್ವಾರಗೆ ಸೀಮಂತದೊಂದಿಗೆ ಬೀಳ್ಕೊಡುಗೆ

0
18

ಯಾದಗಿರಿ: ಇಲ್ಲಿನ ಜಿಲ್ಲಾ ಪಂಚಾಯಿತಿ ಸಿಇಒ ಗರಿಮಾ ಪನ್ವಾರ ಅವರು ವರ್ಗಾವಣೆ ಆಗಿರುವ ಹಿನ್ನೆಲೆಯಲ್ಲಿ ಅವರಿಗೆ ಬೀಳ್ಕೊಡಗೆ ಕಾರ್ಯಕ್ರಮ ಜರುಗಿತು.
ಇದೇ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಮಹಿಳಾ ಅಭಿವೃದ್ದಿ ಅಧಿಕಾರಿಗಳು (ಪಿಡಿಒ) ಬೀಳ್ಕೊಡುಗೆ ಜೊತೆಗೆ ಸೀಮಂತ ಕಾರ್ಯಕ್ರಮ ಮಾಡುವ ಮೂಲಕ ಅವರಿಗೆ ತವರಿನ ಉಡುಗೊರೆ ನೀಡಿ ಸಂಭ್ರಮಿಸಿದರು.
ಸಿಇಒ ಅವರೂ ಖುಷಿಯಿಂದಲೇ ದಂಡೆ, ಹಸಿರು ಗಾಜಿನ ಬಳೆ, ಹಸಿರು ಸೀರೆ ಕುಪ್ಪಸ ಜೊತೆಗೆ ಅರಿಷಿಣ ಕುಂಕುಮ, ೧೧ ಭಗೆಯ ಹಣ್ಣು ಹಂಪಲ, ಸಿಹಿಯನ್ನು ಉಡಿ ತಂಬಿಸಿಕೊಂಡರು. ಸೇರಿದ್ದ ನೂರಾರು ಮಹಿಳಾ ಸಿಬ್ಬಂದಿ ಮತ್ತು ಅಧಿಕಾರಿಗಳು ಸೀಮಂತ ಹಾಡುಗಳನ್ನೂ ಹಾಡಿ ಅಕ್ಕಿಯಿಂದ ಉಡಿ ತುಂಬಿ ಬೀಳ್ಕೊಟ್ಟರು.
ಈ ಸಂದರ್ಭ ಇಡೀ ಜಿಲ್ಲಾ ಪಂಚಾಯಿತಿ ಸಭಾಂಗಣ ತಾಯ್ತನ ಕಾರ್ಯಕ್ರಮಕ್ಕೆ ಸಾಕ್ಷಿಯಾಯಿತು. ಇಒ ಗರೀಮಾ ಪನ್ವಾರ ಅವರು ಬೆಂಗಳೂರಿನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇ-ಆಡಳಿತ ನಿರ್ದೇಶಕರಾಗಿ ವರ್ಗಾವಣೆ ಮಾಡಲಾಗಿದೆ.

Previous articleಮದುವೆಯಾಗುವುದಾಗಿ ನಂಬಿಸಿ ಮೋಸ: ಆರೋಪಿಗೆ 10 ವರ್ಷ ಜೈಲು ಶಿಕ್ಷೆ
Next articleಜಾತಿ ನಿಂದನೆ: ವಕೀಲ ಜಗದೀಶ್ ಬಂಧನ