ಜಾರಕಿಹೊಳಿ ಭೇಟಿಯಲ್ಲಿ ವಿಶೇಷ ಇಲ್ಲ

0
26

ಹಾವೇರಿ: ನಾವೆಲ್ಲ ಇಲಾಖೆ ಕೆಲಸಗಳಿಗೆ ದೆಹಲಿಗೆ ಹೋದಾಗ ಕೇಂದ್ರದ ಸಚಿವರು, ಅಧಿಕಾರಿಗಳನ್ನು ಭೇಟಿ ಆಗುವುದು, ಹಾಗೆ ಪಕ್ಷದ ಹೈಕಮಾಂಡ್ ಭೇಟಿ ಮಾಡುವುದು ಸಹಜ. ಅದರಂತೆ ಸಚಿವ ಸತೀಶ್ ಜಾರಕಿಹೊಳಿ ತಮ್ಮ ಇಲಾಖೆ ಕೆಲಸಕ್ಕೆ ದೆಹಲಿಗೆ ಹೋಗಿದ್ದಾರೆ ಅಷ್ಟೇ. ಭೇಟಿಯಲ್ಲಿ ವಿಶೇಷ ಏನಿಲ್ಲ ಎಂದು ಸಣ್ಣ ನೀರಾವರಿ ಮತ್ತು ವಿಜ್ಞಾನ ತಂತ್ರಜ್ಞಾನ ಸಚಿವ ಎನ್.ಎಸ್. ಭೋಸರಾಜು ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ದೇಶಪಾಂಡೆ ಅವರ ಹೇಳಿಕೆ ತೀರ ಸಹಜವಾದದ್ದು. ಸಿದ್ದರಾಮಯ್ಯ ಪರ ನಿಂತಿದೆ. ೫ ವರ್ಷ ಕಾಯಂ ಆಗಿ ಅವರೇ ಮುಂದುವರೆಯುತ್ತಾರೆ. ಕಾಂಗ್ರೆಸ್ ಪಕ್ಷದವರಿಂದಲೇ ಸಿದ್ದರಾಮಯ್ಯ ಕೆಳಗಿಳಿಸೋ ವಿಚಾರ ನಮ್ಮವರಲ್ಲಿ ಇಲ್ಲ. ನೂರು ಸುಳ್ಳು ಹೇಳಿ ಬಿಜೆಪಿಯವರು ನಿಜ ಮಾಡೋಕೆ ಹೋಗ್ತಾರೆ. ಲೋಕಸಭಾ ಚುನಾವಣೆಯಲ್ಲಿ ನಾವು ೧ಸ್ಥಾನದಿಂದ ೯ಕ್ಕೆ ಏರಿದ್ದೇವೆ ಎಂದರು.

Previous articleಜಿಲ್ಲಾಸ್ಪತ್ರೆಗೆ ಲೋಕಾಯುಕ್ತ ಬಿ.ಎಸ್. ಪಾಟೀಲ್ ಭೇಟಿ ನೀಡಿ ಪರಿಶೀಲನೆ
Next articleಮುಸ್ಲಿಮರ ಒತ್ತಡ ಉತ್ತಮ ಶಿಕ್ಷಕ ಪ್ರಶಸ್ತಿಗೆ ತಡೆ