ಜಾತಿಜನಗಣತಿ ಒಪ್ಪಲಾಗುವುದಿಲ್ಲ

0
48

ದಾವಣಗೆರೆ: ಜಾತಿ ಜನಗಣತಿಯ ವರದಿಗಿಂತ ನಮ್ಮ ಸಮುದಾಯದ ಜನಸಂಖ್ಯೆ ಹೆಚ್ಚಿರುವುದು ಸೇರಿದಂತೆ ಹಲವು ಕಾರಣಗಳಿಗೆ ಸರ್ಕಾರಕ್ಕೆ ಒಪ್ಪಿಸಲಾಗಿರುವ ಜಾತಿ ಸಮೀಕ್ಷೆ ವರದಿಯನ್ನು ಒಪ್ಪಲು ಸಾಧ್ಯವೇ ಇಲ್ಲ ಎಂದು ಹರಿಹರ ಪಂಚಮಸಾಲಿ ಮಠದ ಪೀಠಾಧ್ಯಾಕ್ಷ, ಶ್ವಾಸಗುರು ಶ್ರೀ ವಚನಾನಂದ ಸ್ವಾಮೀಜಿ ಹೇಳಿದ್ದಾರೆ.
ರಾಜ್ಯದಲ್ಲಿ ಹೆಚ್ಚು ಜನಸಂಖ್ಯೆ ಹೊಂದಿರುವ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜವು ವರದಿಯಲ್ಲಿ ಕಡಿಮೆ ದಾಖಲಾಗಿರುವುದು ಕಂಡರೆ ಮೇಲ್ನೋಟಕ್ಕೆ ಈ ವರದಿ ಅವೈಜ್ಞಾನಿಕವಾಗಿರುವಂತೆ ಕಂಡುಬರುತ್ತಿದೆ. ನಮ್ಮ ಸಮುದಾಯದ ಜನಸಂಖ್ಯೆ ವರದಿಯಲ್ಲಿ ದಾಖಲಾಗಿರುವುದಕ್ಕಿಂತ ಹೆಚ್ಚಾಗಿದೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಜಾತಿಗಣತಿ ಸಮೀಕ್ಷೆ ನಡೆಸಿ ಹತ್ತು ವರ್ಷಗಳಿಗೂ ಅಧಿಕ ಸಮಯವಾಗಿದ್ದು, ಈಗ ಅದು ಎಷ್ಟು ಪ್ರಸ್ತುತ ಎಂಬುದನ್ನು ಸರ್ಕಾರ ತಿಳಿಯಬೇಕಿದೆ ಮತ್ತು ಸಮೀಕ್ಷೆ ಮಾಡುವವರು ಸಾಕಷ್ಟು ಮನೆಗಳಿಗೆ ಭೇಟಿ ನೀಡದಿರುವುದು ಸ್ಪಷ್ಟವಾಗಿದ್ದು, ಸಮೀಕ್ಷೆ ಮಾಡುವವರು ಕರ್ತವ್ಯಲೋಪ ಎಸಗಿರುವುದು ಕಂಡು ಬಂದಿದೆ. ವರದಿಯ ಅಂಕಿ ಅಂಶಗಳು ತಪ್ಪಾಗಿದ್ದರೆ ಫಲಾನುಭವಿಗಳ ಆಯ್ಕೆಯೂ ತಪ್ಪಾಗುವ ಸಾಧ್ಯತೆಯಿದೆ ಎಂದು ಅವರು ಅಭಿಪ್ರಾಯಿಸಿದ್ದಾರೆ.
ವರದಿಯ ಅಂಕಿ ಅಂಶಗಳಲ್ಲಿ ಲೋಪವಾದರೆ ಸಹಜವಾಗಿಯೇ ಸರ್ಕಾರದ ಉದ್ಧೇಶವು ಈಡೇರುವುದಿಲ್ಲ ಆದ್ದರಿಂದ ಎಲ್ಲಾ ಕಾರಣಗಳಿಗೆ ಜಾತಿಗಣತಿಯನ್ನು ಒಪ್ಪಲು ಸಾಧ್ಯವಿಲ್ಲ ಎಂದಿದ್ದಾರೆ.

Previous articleನಕಲಿ ನೋಟಿನ ಆರೋಪಿ ಒಂದು ವಾರ ಕಸ್ಟಡಿಗೆ
Next articleರಾಜ್ಯ ನಿವೃತ್ತ ಡಿಜಿಪಿ ಓಂ ಪ್ರಕಾಶ್‌ ಕೊಲೆ: ಪತ್ನಿ ಮೇಲೆ ಶಂಕೆ