ಜಾತಿಗಣತಿ ಮಂಡನೆಯಿಂದ ಹಿಂದೆ ಸರಿಯುವಲ್ಲಿ ಒತ್ತಡ ಇಲ್ಲ

0
32

ಹುಬ್ಬಳ್ಳಿ: ಜಾತಿ ಜನಗಣತಿ ವರದಿ ಸಚಿವ ಸಂಪುಟ ಸಭೆಯಲ್ಲಿ ಮಂಡನೆಯಾಗದೇ ಇರಲು ಪಕ್ಷದ ಪ್ರಭಾವಿ ಸಚಿವರು-ಶಾಸಕರು ಮತ್ತು ರಾಜ್ಯ ಮಠಾಧಿಪತಿಗಳ ಒತ್ತಡ ಕಾರಣ ಎಂಬ ಅನಿಸಿಕೆಯನ್ನು ಕಾಂಗ್ರೆಸ್ ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಬಲವಾಗಿ ನಿರಾಕರಿಸಿದರು.
ಶನಿವಾರ ಹುಬ್ಬಳ್ಳಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಯಾರ ಒತ್ತಡದಿಂದಲೂ ಜಾತಿ ಜನಗಣತಿ ಮಂಡನೆ ಮಾಡುವುದರಿಂದ ಹಿಂದೆ ಸರಿದಿಲ್ಲ' ಎಂದು ಒತ್ತಿ ಹೇಳಿದರು. ಮೊದಲನೆಯದ್ದಾಗಿ ಜಾತಿ ಜನಗಣತಿ ಯಾವುದೇ ನಿರ್ದಿಷ್ಟ ಜಾತಿ ಅಥವಾ ಜಾತಿಗಳ ಪ್ರಾಬಲ್ಯ ಗುರುತಿಸುವುದಕ್ಕಾಗಿ ನಡೆದ ರಾಜಕೀಯ ಅಂಶವನ್ನು ಹೊಂದಿಲ್ಲ. ಕಾಂಗ್ರೆಸ್ ಪಕ್ಷ ಚುನಾವಣೆ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಯಂತೆ ಜಾತಿ ಜನಗಣತಿ ನಡೆದಿದೆ. ಯಾವ ಜಾತಿಗಳು ಎಷ್ಟಿವೆ ಮತ್ತು ಎಷ್ಟು ಹಿಂದುಳಿದಿವೆ ಎಂಬುದನ್ನು ಗುರುತಿಸಿ, ಅವುಗಳ ಅಭ್ಯುದಯಕ್ಕಾಗಿ ಬಜೆಟ್‌ನಲ್ಲಿ ಯೋಜನೆಗಳನ್ನು ರೂಪಿಸುವ ಉದ್ದೇಶವನ್ನಷ್ಟೇ ಇದು ಹೊಂದಿದೆ. ಸೂಕ್ತ ಸಂದರ್ಭದಲ್ಲಿ ಇದು ಮಂಡಿತವಾಗುತ್ತದೆ’ ಎಂದು ಸುರ್ಜೇವಾಲಾ ಹೇಳಿದರು.

Previous articleಸಿಎಂ ಬದಲಾವಣೆ ವಿಚಾರ ಚರ್ಚೆ ಅಪ್ರಸ್ತುತ
Next articleದೈವೀಭಕ್ತಿ, ಸಂತರ ಆಶೀರ್ವಾದವೇ ಭಾರತದ ಮೂಲ ಸತ್ವ; `ಮಹಾಬಲಿ ಗ್ರೇಟ್ ಖಲಿ’