ಜಾತಿಗಣತಿ ಕಸದ ಬುಟ್ಟಿಗೆ ಎಸೆದಿದ್ದೇಕೆ ಸಿಎಂ ಸ್ಪಷ್ಟಪಡಿಸಲಿ

ದಾವಣಗೆರೆ: ಕಾಂತರಾಜ್ ಆಯೋಗ ದಿಂದ ಸಮೀಕ್ಷೆಗೆ ಖರ್ಚು ಮಾಡಿದ್ದ 170 ಕೋಟಿ ರೂ. ಹಣವನ್ನು ಕಾಂಗ್ರೆಸ್ಸೇ ಭರಿಸಬೇಕು. ಜಾತಿಗಣತಿ ವರದಿ ವೈಜ್ಞಾನಿಕವಾಗಿದೆ ಎನ್ನುವುದಾದರೆ ಅದನ್ನು ಕಸದ ಬುಟ್ಟಿಗೆ ಎಸಿದಿದ್ದೇಕೆ?, ಕಾಂತರಾಜ ಆಯೋಗದ ವರದಿಯ ಮೂಲ ಪ್ರತಿ ಎಲ್ಲಿಗೆ ಹೋಯಿತು ಎಂಬುದನ್ನು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಬೇಕು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಸವಾಲು ಹಾಕಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ೨೦೧೩ರಲ್ಲಿ ಅಧಿಕಾರಕ್ಕೆ ಬಂದಿದ್ದ ಸಿದ್ದರಾಮಯ್ಯ ಸರಕಾರ ೧೭೦ ಕೋಟಿ ರೂ. ಖರ್ಚು ಮಾಡಿ, ಕಾಂತರಾಜ ಆಯೋ ಗದಿಂದ ಸಮೀಕ್ಷೆ ಮಾಡಿಸಿತ್ತು. ಹೈಕಮಾಂಡ್ ಸಿದ್ದರಾಮ ಯ್ಯರನ್ನು ದಿಲ್ಲಿಗೆ ಕರೆಸಿ, ಕಾಂತರಾಜ ಆಯೋಗದ ವರದಿ ಕಸದ ಬುಟ್ಟಿಗೆ ಬಿಸಾಕಿ, ಕಿವಿ ಹಿಂಡಿದ ಮೇಲೆ ಶರಣಾಗಿ ಮರು ಸಮೀಕ್ಷೆ ನಡೆಸಲು ಮುಂದಾಗಿದ್ದಾರೆ. ಇದು ಕುರ್ಚಿ ಗಾಗಿ ಸಿದ್ದರಾಮಯ್ಯ ನಿಲುವು ಬದಲಾಯಿಸುತ್ತಾರೆಂಬುದಕ್ಕೆ ಸ್ಪಷ್ಟ ಸಾಕ್ಷಿ ಎಂದು ಹೇಳಿದರು.
ಈಗಾಗಲೇ ಕಾಂಗ್ರೆಸ್ ಹೈಕಮಾಂಡ್‌ನಲ್ಲಿ ಸಿಎಂ ಬದಲಾವಣೆ ಬಗ್ಗೆ ಚರ್ಚೆ ನಡೆದಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಮಧ್ಯೆ ಸ್ಪರ್ಧೆ ನಡೆ ಯುತ್ತಿದ್ದು, ಬರುವ ಅಕ್ಟೋಬರ್ ಅಥವಾ ನವೆಂಬರ್ ವೇಳೆಗೆ ಸಿಎಂ ಕುರ್ಚಿಗಾಗಿ ಇಬ್ಬರ ಮಧ್ಯೆ ಕಲಹ ಆರಂಭವಾಗಲಿದೆ ಎಂದು ಭವಿಷ್ಯ ನುಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಪ್ತರು ಸಿಎಂ ಕುರ್ಚಿ ಖಾಲಿ ಇಲ್ಲ ಎನ್ನುತ್ತಿದ್ದಾರೆ. ಆದರೆ, ಈಗಾಗಲೇ ಕಾಂಗ್ರೆಸ್ ಹೈಕಮಾಂಡ್‌ನಲ್ಲಿ ಸಿಎಂ ಬದಲಾವಣೆ ಬಗ್ಗೆ ಚರ್ಚೆ ನಡೆ ದಿದೆ. ಸಿಎಂ ಕುರ್ಚಿ ಬಿಟ್ಟು ಕೊಡುತ್ತಾರೋ, ಇಲ್ಲವೋ ಅದು ಕಾಂಗ್ರೆಸ್‌ನ ಆಂತರಿಕ ವಿಚಾರ. ಆದರೆ, ಬೀದಿ ಜಗಳ, ಸಂಘರ್ಷ ಆಗೋದು ಗ್ಯಾರಂಟಿ ಎಂದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ರಾಜು ವೀರಣ್ಣ, ಪ್ರವೀಣ್ ಜಾಧವ್, ಪಂಜು ಪೈಲ್ವಾನ್, ಕೆ.ಎನ್. ವೆಂಕಟೇಶ್, ಚೇತನ್, ಅಜಯ್, ರವಿಗೌಡ ಇದ್ದರು.