ಬಳ್ಳಾರಿ: ತುಂಗಭದ್ರಾ ಜಲಾಶಯದ ೧೯ ನೇ ಕ್ರಸ್ಟ್ ಗೇಟ್ ಮರು ಅಳವಡಿಕೆ ಚಾಲನೆ ದೊರೆತಿದ್ದು, ನಿನ್ನೆಯೇ ಬಂದಿದ್ದ ಬೃಹತ್ ಎರಡು ಕ್ರೇನ್ ಹಾಗೂ ಹೈಡ್ರೋ, ಫಾಲ್ ಫಿಂಗರ್ ವಾಹನಗಳು ಜಲಾಶಯ ಮೇಲ್ಬಾಗಕ್ಕೆ ಬಂದಿವೆ.

ಒಟ್ಟು ೯೦ ಟನ್ ಸಾಮಥ್ರ್ಯದ ಒಂದು ಟನ್, ೫೫ ಟನ್ ನ ಮತ್ತೊಂದು ಕ್ರೇನ್ ಬಂದಿದ್ದು, ಇವುಗಳಿಗೆ ಪೂರಕವಾಗಿ ಹೈಡ್ರೋ, ಫಾಲ್ ಫಿಂಗರ್ ವಾಹನಗಳನ್ನು ಕ್ರಸ್ಟ್ ಗೇಟ ೧೯ರ ಬಳಿ ಬಿಡಲಾಯಿತು. ಜೆಎಸಬ್ಲ್ಯೂ, ನಾರಾಯಣ ಎಂಜಿನಿಯರ್‌ಗೆ ಸೇರಿದ ಮಷಿನರಿಗಳಾಗಿವೆ. ಮತ್ತೊಂದು ಕಬ್ಬಿಣದ ಭೀಮ್ ಗಳನ್ನು ಹೊತ್ತ ಲಾರಿಯನ್ನು ಬಿಡಲಾಯಿತು. ಡ್ಯಾಂ ಸ್ಟಚರ್ ನಿಂದ ಕೌಂಟರ್ ವೇಟ್ ಕೆಳಗೆ ಇಳಿಸಿಕೊಂಡು ಎರಡು ಬದಿ ಟ್ರ್ಯಾಕ್ ನಿರ್ಮಾಣ ಮೂಲಕ ಕಾಮಗಾರಿಗೆ ಚಾಲನೆ ನೀಡಲಾಯಿತು.