ಜರ್ಮನ್‌ ಯುವತಿಯ ಮತ್ತೊಂದು ಹಾಡು ಹಂಚಿಕೊಂಡ ಮೋದಿ

0
9

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಜರ್ಮನ್ ಯುವತಿ ಕ್ಯಾಸಂಡ್ರ ಮೇ ಸ್ಪಿಟ್‌ಮನ್‌ ಅವರ ಮತ್ತೊಂದು ಹಾಡನ್ನು ಇಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಮನ್ ಕಿ ಬಾತ್ ಎಂಬ ಜನಪ್ರಿಯ ರೆಡಿಯೋ ಕಾರ್ಯಕ್ರಮದಲ್ಲಿ ಯುವತಿಯ ಹಾಡಿನ ಬಗ್ಗೆ ಮೋದಿ ಶ್ಲಾಘಿಸಿದ್ದರು. ಇಂದು ಇಡೀ ದೇಶವು ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜನ್ಮದಿನದಂದು ತನ್ನದೇ ಆದ ರೀತಿಯಲ್ಲಿ ಗೌರವ ಸಲ್ಲಿಸುತ್ತಿದೆ. ಈ ಸಂದರ್ಭದಲ್ಲಿ, ಜರ್ಮನ್ ಗಾಯಕಿ ಮಹಾತ್ಮ ಗಾಂಧಿಯವರ ಅತ್ಯಂತ ನೆಚ್ಚಿನ ಹಾಡು “ವೈಷ್ಣವ ಜನ ತೋ” ಎಂಬ ಹಾಡನ್ನು ಯುವತಿ ಹಾಡಿ ಹಂಚಿಕೊಂಡಿದ್ದಾರೆ. ಈ ವಿಡಿಯೋವನ್ನು ಪ್ರಧಾನಿ ನರೇಂದ್ರ ಮೋದಿ ಕೂಡ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. “ಗಾಂಧೀಜಿಯವರ ಆಲೋಚನೆಗಳು ಪ್ರಪಂಚದಾದ್ಯಂತದ ಜನರೊಂದಿಗೆ ಸಂಪರ್ಕ ಹೊಂದಿವೆ!” ಎಂದಿದ್ದಾರೆ.

Previous articleಕಾನೂನು ಸುವ್ಯವಸ್ಥೆ ಕಾಪಾಡಲು ಸರ್ಕಾರ ವಿಫಲ
Next articleದೇಶ ವಿರೋಧಿ ಶಕ್ತಿ ಮಟ್ಟ ಹಾಕಿ