ಜಮೀನು ವಿವಾದ: ವಿಧವೆ ಬೆತ್ತಲು ಮಾಡಿ ಕ್ರೌರ್ಯ…!

ಬೆಳಗಾವಿ: ತುಂಡು ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಸವದತ್ತಿ ತಾಲೂಕಿನ ಉಗರಗೋಳ ಸಮೀಪದ ಹರ್ಲಾಪುರದಲ್ಲಿ ವಿಧವೆಯೊಬ್ಬಳನ್ನು ಬೆತ್ತಲೆಗೊಳಿಸಿ ಕ್ರೌರ್ಯ ಮೆರೆಯಲಾಗಿದೆ.
ಹರಿದ ಬಟ್ಟೆಯಲ್ಲಿ ಠಾಣೆಗೆ ವಿಧವೆ ರತ್ನಾ ಅಣ್ಣಪ್ಪ ಪಟ್ಟಣಶೆಟ್ಟಿ(೩೫) ಹೋಗಿದ್ದರೂ ಕೂಡ ಪೊಲೀಸರು ಇಲ್ಲಿಯವರೆಗೆ ಪ್ರಕರಣ ದಾಖಲು ಮಾಡಿಕೊಂಡಿಲ್ಲ ಎಂದು ಹೇಳಲಾಗುತ್ತಿದೆ. ಸಂತ್ರಸ್ತೆಗೆ ನಿನ್ನ ಮಗ ಇದ್ದಾನೆ, ನಿನಗೆ ಜೀವಕ್ಕೆ ಧಕ್ಕೆಯಾದರೆ ಎನ್ನುವ ಹೆದರಿಕೆ ಮಾತುಗಳನ್ನೇ ಪೊಲೀಸರು ಹೇಳಿದರೆನ್ನಲಾಗಿದ್ದು ಇದು ಜಿಲ್ಲೆಯ ಪೊಲೀಸ್ ವ್ಯವಸ್ಥೆಗೆ ಹಿಡಿದ ಕೈಗನ್ನಡಿ.