Home Advertisement
Home ನಮ್ಮ ಜಿಲ್ಲೆ ಚಿಕ್ಕಮಗಳೂರು ಜಮೀನು ಒತ್ತುವರಿಯಾಗಿದ್ದರೇ ತೆರವುಗೊಳಿಸಲಿ

ಜಮೀನು ಒತ್ತುವರಿಯಾಗಿದ್ದರೇ ತೆರವುಗೊಳಿಸಲಿ

0
67

ಚಿಕ್ಕಮಗಳೂರು: ನನ್ನ ಹಾಗೂ ನನ್ನ ಕುಟುಂಬದ ಒಡೆತನದಲ್ಲಿ ರುವ ಜಮೀನು ಒತ್ತುವರಿಯಾಗಿದ್ದರೇ ಅಧಿಕಾರಿಗಳು ತೆರವು ಗೊಳಿಸಲಿ ಎಂದು ಇಂಧನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಅಧಿಕಾರಿಗಳಿಗೆ ತಿಳಿಸಿದರು.

ಗುರುವಾರ ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಒತ್ತುವರಿಯಾಗಿದ್ದಲ್ಲಿ ಅಧಿಕಾರಿಗಳಿಗಳು ಜಂಟಿ ಸರ್ವೇ ನಡೆಸಿ ಒತ್ತುವರಿ ಕಂಡು ಬಂದರೆ ತೆರವುಗೊಳಿಸಲಿ ಎಂದ ಅವರು ಕಾಯ್ದಿರಿಸಿದ ಅರಣ್ಯದಲ್ಲಿನ ಒತ್ತುವರಿಯನ್ನು
ಸುಪ್ರೀಂ ಕೋರ್ಟ್ ಆದೇಶ ದಂತೆ ಒತ್ತುವರಿ ತೆರವು ಮಾಡಲಾಗುತ್ತಿದೆ. ಮೂರು ಎಕರೆ ಒತ್ತುವರಿ ಜಮೀನು ಇದ್ದರೇ ತೆರವುಗೊಳಿಸುವುದಿಲ್ಲ ಅವರಿಗೆ ಪರ್ಯಾಯ ವ್ಯವಸ್ಥೆ ಮಾಡುವುದಾಗಿ ತೆರವು ಮಾಡುವುದಾಗಿ ಅರಣ್ಯ ಸಚಿವರು ಈಗಾಗಲೇ ಹೇಳಿಕೆ ನೀಡಿದ್ದಾರೆ ಎಂದರು.

ನನ್ನ ತೋಟದಲ್ಲಿ ಒತ್ತುವರಿಯಾಗಿದ್ದರೇ ತೆರವುಗೊಳಿಸುವಂತೆ ಸಂಘಟನೆಗಳು ನೀಡಿರುವ ಹೇಳಿಕೆಯನ್ನು ಸ್ವಾಗತಿಸುತ್ತೇನೆ. ಒತ್ತುವರಿ ಇದ್ದರೇ ನನ್ನ ತೋಟದಿಂದಲೇ ತೆರವು ಆರಂಭಿಸಲಿ, ಜಂಟಿ ಸರ್ವೇ ಮಾಡಿ ತೆರವು ಮಾಡಲಿ ನಮ್ಮ ಒಮೀನಿನಲ್ಲಿ ಒತ್ತುವರಿ ಇದೆಯೇ ಗೊತ್ತಾಗಬೇಕಲ್ಲ. ಹಾಗಾಗೀ ಜಂಟಿ ಸರ್ವೇ ಮಾಡಲಿ, ಕಾನೂನು ಬಾಹಿರ ವಾಗಿ ಒತ್ತುವರಿ ಇದ್ದರೇ ಒತ್ತುವರಿ ತೆರವು ಮಾಡಲಿ ಎಂದರು.

Previous articleಬಿಟಿಡಿಎ ಹಗರಣ: ಸಿಐಡಿ ತನಿಖೆಗೆ
Next articleನೆರೆಯ ಬಾಂಗ್ಲಾದೇಶದ ಹಿಂದುಗಳ ರಕ್ಷಣೆಗೆ ಕೇಂದ್ರ ಸರ್ಕಾರ ಕ್ರಮವಹಿಸಲಿ