ಜಮೀನಿನ ನಕಾಶ ಪೂರೈಸಲು ಲಂಚ ಸ್ವೀಕಾರ: ಭೂ ಮಾಪಕನ ಬಂಧನ

0
29

ಹಾವೇರಿ: ಜಮೀನಿನ ನಕಾಶೆ ಪೂರೈಸಲು ಲಂಚ ಸ್ವೀಕರಿಸುತ್ತಿದ್ದ ಭೂ ಮಾಪಕನನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.

ಹಾವೇರಿ ತಾಲೂಕ ಕಚೇರಿಯ ಭೂಮಾಪಕ ಅಶೋಕ ಎಚ್. ಜಿ. ಲಂಚ ಸ್ವೀಕರಿಸಿ ಬಂಧನಕೊಳ್ಳಗಾದ ಭೂಮಾಪಕರಾಗಿದ್ದಾರೆ.

ಹಾವೇರಿ ತಾಲೂಕಿನ ಕಳ್ಳಿಹಾಳ ಗ್ರಾಮದ ಮಂಜುನಾಥ ಗದಿಗೆಪ್ಪ ತಂದೆಯವರಿಂದ ಸಂಬಂಧಿಸಿದ ಜಮೀನು ವಾಟ್ನಿ ಮಾಡಿಸಲು ಅರ್ಜಿ ಸಲ್ಲಿಸಿದರು.

ಇದರ ನಕಾಶೆ ಪೂರೈಸಲು 30 ಸಾವಿರ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದ ಭೂಮಾಪಕ ಆಶೋಕ, 25 ಸಾವಿರ ರೂಪಾಯಿಗೆ ಒಪ್ಪಿಕೊಂಡು 15 ಸಾವಿರ ಮುಂಗಡ ಹಣ ಸ್ವೀಕರಿಸುವಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಬಂಧಿಸಿದ್ದಾರೆ.

ಹಾವೇರಿ ಬಸವೇಶ್ವರ ನಗರದ 12 ನೇ ಕ್ರಾಸ್ನಲ್ಲಿರು ಮನೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಟ್ರಾಪ್ ಮಾಡಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆ ಮುಂದುವರೆದಿದೆ.

Previous articleಅನಾಮಧೇಯ ಪತ್ರವನ್ನ ಬಿಜೆಪಿಯವರೇ ಯಾಕೆ ಬರೆದಿರಬಾರದು ?
Next articleಪೇಜಾವರ ಶ್ರೀಗೆ ಗೌರವ ಡಾಕ್ಟರೇಟ್‌