ಜನಿವಾರ್‌ ಪ್ರಕರಣ: ಬೆಳಗಾವಿಯಲ್ಲಿ ಬ್ರಾಹ್ಮಣ ಸಮಾಜದಿಂದ ಪ್ರತಿಭಟನೆ

0
17

ಬೆಳಗಾವಿ: ಸಿಇಟಿ ಪರೀಕ್ಷೆ ವೇಳೆ ಜನಿವಾರ ತೆಗೆಸಿ ಅವಮಾನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದಲ್ಲಿ ಬ್ರಾಹ್ಮಣ ಸಮಾಜದಿಂದ ಪ್ರತಿಭಟನೆ ನಡೆಯಿತು.
ಶಿವಮೊಗ್ಗ ಸೇರಿದಂತೆ ಧಾರವಾಡ ಹಾಗೂ ಬೀದರ್ ಮತ್ತತ ಇತರ ಜಿಲ್ಲೆಗಳಲ್ಲಿ ಸಿಇಟಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಜನಿವಾರವನ್ನು ತೆಗೆದು ಹಾಕಲು ಹಾಗೂ ಕತ್ತರಿಸಿದ ಘಟನೆ ಸಂಭದಿಸಿದಂತೆ, ಇದು ನಮ್ಮ ಧಾರ್ಮಿಕ ಭಾವನೆಗಳಿಗೆ ಹಾಗೂ ಸಂಪ್ರದಾಯಗಳಿಗೆ ಆಘಾತ ತರುವಂತಹದ್ದು. ಈ ಅನ್ಯಾಯದ ವಿರುದ್ಧ ಶಾಂತಿಯುತವಾಗಿ ಪ್ರತಿಭಟನೆ ನಡೆಸಿ ಪರೀಕ್ಷೆಯಿಂದ ವಂಚಿತನಾದ ವಿದ್ಯಾರ್ಥಿಗೆ ಸರಿಯಾದ ನ್ಯಾಯ ಒದಗಿಸಿಕೊಡಬೇಕು. ಈ ವಿಷಯದಲ್ಲಿ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಜನಿವಾರ ಎನ್ನುವುದು ಬ್ರಾಹ್ಮಣ ಸಮುದಾಯದವರಿಗೆ ಅತ್ಯಂತ ಪವಿತ್ರವಾದುದು. ಹೋಮ-ಹವನಗಳನ್ನು ಮಾಡಿ ಅತ್ಯಂತ ಸಂಪ್ರದಾಯಬದ್ಧ ಹಾಗೂ ಶಾಸ್ತ್ರೋಕ್ತವಾಗಿ, ಶ್ರದ್ಧಾಭಕ್ತಿಗಳಿಂದ ಈ ಪವಿತ್ರ ಜನಿವಾರವನ್ನು ಧರಿಸಲಾಗುತ್ತದೆ. ಇದಕ್ಕೆ ವಿಶೇಷ ಹಾಗೂ ದೈವಿಕ ಸ್ಥಾನವಿದೆ, ಇಂತಹ ಪವಿತ್ರ ಜನಿವಾರವನ್ನು ಜಾತಕ, ಗುರುಬಲ, ನೋಡಿ ದಿನಾಂಕ ನಿರ್ಧರಿಸಿ ಬ್ರಾಹ್ಮಣರು ಧರಿಸುತ್ತಾರೆ. ಬ್ರಾಹ್ಮಣ ಸಂಪ್ರದಾಯವನ್ನು ಧಿಕ್ಕರಿಸಿ, ಜನಿವಾರವನ್ನು ಕಿತ್ತೆಸದ ಅಧಿಕಾರಿಗಳ ವರ್ತನೆ ಖಂಡನೀಯ ಹಾಗೂ ಆಕ್ಷೇಪಾರ್ಹ ಎಂದು ಕಿಡಿಕಾರಿದರು. ಇನ್ನು ಪ್ರತಿಭಟನೆಯಲ್ಲಿ ಶಾಸಕ ಅಭಯ ಪಾಟೀಲ, ಅನಿಲ ಪೋತದಾರ, ಎಕೆಬಿಎಂಸ್ ಜಿಲ್ಲಾಫ್ರತಿನಿಧಿ ಅಕ್ಷಯ ಕುಲಕರ್ಣಿ, ಬ್ರಾಹ್ಮಣ ಸಮಾಜ ಟ್ರಸ್ಟ್ ಉಪಾಧ್ಯಕ್ಷ ಭರತ ದೇಶಪಾಂಡೆ, ಮುತಾಲಿಕ ದೇಸಾಯಿ, ಮಾಜಿ ನಗರಸೇವಕಿ ಅನುಶ್ರಿ ದೇಶಪಾಂಡೆ, ಸೇರಿದಂತೆ ವಿಪ್ರ ಬಳಗ ಮತ್ತು ಪಾಶ್ಚಾಪುರಬಮತ್ತಿತರ ಕಡೆಯಿಂದ ಬ್ರಾಹ್ಮಣ ಸಮಾಜದವರು ಆಗಮಿಸಿದ್ದರು.

Previous articleಕೆಲವು ರೈಲುಗಳ ಸಂಚಾರ ರದ್ದು, ಇನ್ನು ಕೆಲವು ಭಾಗಶಃ ರದ್ದು
Next articleಕುರ್ಚಿಗೆ ಕಂಟಕ ಬಂದಾಗ ಸಿಎಂ ಜಾತಿ ಗಣತಿ ಮುನ್ನೆಲಗೆ