ಜನಾರ್ದನ ರೆಡ್ಡಿಗೆ ಟಾಂಗ್ ನೀಡಿದ ತುಕಾರಂ

0
21

ಬಳ್ಳಾರಿ: ಬಿಜೆಪಿಯವರಿಗೆ ಅಭಿವೃದ್ಧಿ ಬಗ್ಗೆ ಮಾತನಾಡೋ ನೈತಿಕತೆ ಇಲ್ಲ. ‌ಆರೋಪ ಪ್ರತ್ಯಾರೋಪ ಮಾಡಿ ಸಮಯ ಕಳೆಯುತ್ತಿದ್ದಾರೆ ಎಂದು ಸಂಸದ ಇ.ತುಕಾರಾಂ ಹೇಳಿದರು.
ಸಂಡೂರಿನಲ್ಲಿ ಪತ್ನಿ ಜತೆ ನಾಮ ಪತ್ರ ಸಲ್ಲಿಕೆಗೆ ತೆರಳುವ ಮುನ್ನ ಮಾಧ್ಯಮಗಳ ಜತೆ ಮಾತನಾಡಿದರು. ಬಳ್ಳಾರಿಯಲ್ಲಿ ಹುಲಿ ಸಿಂಹಗಳನ್ನೆಲ್ಲಾ ನೋಡಿದ್ದೇವೆ. ನಾವು ರಾಜರು, ಸಂಡೂರಿನ ಪ್ರತಿಯೊಬ್ಬರೂ ರಾಜರು. ಘೋರ್ಪಡೆ ಹಾಗೂ ಲಾಡ್ ಕುಟುಂಬಸ್ಥರು ಸಂಡೂರನ್ನ ದಶಕಗಳ ಕಾಲ ಆಳಿದ್ದಾರೆ. ಆ ಬಳಿಕ ಮೀಸಲಾತಿ ಬದಲಾದ ಮೇಲೆ ಜನ ನನಗೆ ಆಶೀರ್ವಾದ ಮಾಡಿದ್ದಾರೆ. ಜನ ನಮ್ಮ ಜೊತೆಗಿದ್ದಾರೆ ಎನ್ನುತ್ತಲೇ ತುಕಾರಂ ಜನಾರ್ಧನರೆಡ್ಡಿಗೆ ಟಾಂಗ್ ಕೊಟ್ಟರು. ಸಂಡೂರು ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಮಾತನಾಡಿ, ಜನರಿಂದ ಉತ್ತಮ ರೆಸ್ಪಾನ್ಸ್ ಬರ್ತಿದೆ. 2008 ರಿಂದಲೂ ಜನಾರ್ಧನರೆಡ್ಡಿ ಅವರನ್ನ ಎದುರಿಸುತ್ತಾ ಬಂದಿದ್ದೇವೆ. ನಮಗೇನು ಹೊಸದಲ್ಲ, ನಾವುಗೆದ್ದೇ ಗೆಲ್ತೇವೆ. ಜನರ ಆಶೀರ್ವಾದ ನಮ್ಮ ಜೊತೆಗಿದೆ. ನಮ್ಮ ಪಕ್ಷದಲ್ಲಿ ಮಹಿಳೆಯರಿಗೂ ಸಮಾನ ಸ್ಥಾನಮಾನ ಕೊಟ್ಟಿದ್ದಾರೆ. ಅದಕ್ಕೆ ನಾನೇ ಸ್ಪಷ್ಟ ಉದಾಹರಣೆ ಎಂದ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಹೇಳಿದರು.

Previous articleಪ್ರಿಯಾಂಕಾ ಗಾಂಧಿ ನಾಮಪತ್ರ ಸಲ್ಲಿಕೆ ವೇಳೆ ಖರ್ಗೆ ಹೊರಕ್ಕೆ: ದಲಿತರಿಗೆ ಮಾಡಿದ ಅವಮಾನ
Next articleವಿಧಾನ ಪರಿಷತ್: ನಿರೀಕ್ಷೆಯಂತೆ ಬಿಜೆಪಿ ಸುಲಭ ಗೆಲುವು