ಜನಹಿತಕ್ಕೆ ಆದ್ಯತೆ ನೀಡಿದ ಕೇಂದ್ರ

0
15
bsy

ಬೆಂಗಳೂರು: ರಾಜಕೀಯಕ್ಕಿಂತಲೂ ಜನಹಿತಕ್ಕೆ ಆದ್ಯತೆ ನೀಡಿ, ಕೇಂದ್ರ ಸರಕಾರ ಕರ್ತವ್ಯಪ್ರಜ್ಞತೆ ಮೆರೆದಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು ಭೀಕರ ಬರಗಾಲದ ಕರಿಛಾಯೆಯಲ್ಲಿ ಸಿಲುಕಿ ನರಳುತ್ತಿದ್ದ ನಮ್ಮ ಅನ್ನದಾತ ರೈತರ ನೆರವಿಗೆ ಧಾವಿಸದೆ, ರಾಜ್ಯ ಸರ್ಕಾರ ತನ್ನದೇ ಕೀಳು ರಾಜಕೀಯ ಮೇಲಾಟ, ಕೆಸರೆರಚಾಟದಲ್ಲಿ ನಿರತವಾಗಿತ್ತು. ಆದರೆ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದರೂ, ತಾಂತ್ರಿಕ ಅಡಚಣೆ ನಿವಾರಿಸಿ, ರಾಜ್ಯದ ಸಂಕಷ್ಟಕ್ಕೆ ಪರಿಹಾರ ಒದಗಿಸಲು ಕೇಂದ್ರ ಸರ್ಕಾರ 3,454 ಕೋಟಿ ರೂ. ಬರ ಪರಿಹಾರ ನೀಡಿದೆ. ಆ ಮೂಲಕ ರಾಜಕೀಯಕ್ಕಿಂತಲೂ ಜನಹಿತಕ್ಕೆ ಆದ್ಯತೆ ನೀಡಿ, ಕರ್ತವ್ಯಪ್ರಜ್ಞತೆ ಮೆರೆದಿದೆ. ಇದಕ್ಕಾಗಿ ಕರ್ನಾಟಕದ ಸಮಸ್ತ ಜನತೆಯ ಪರವಾಗಿ ಆದರಣೀಯ ಪ್ರಧಾನಮಂತ್ರಿ ನರೇಂದ್ರ ಮೋದಿರವರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದಿದ್ದಾರೆ

Previous articleಊಟ ಬಿಟ್ಟು ಉಪ್ಪಿನಕಾಯಿ ಕೊಟ್ಟಿದ್ದಾರೆ
Next articleಬರ ಪರಿಹಾರ: ಇದು ಬಹಳ ಕಡಿಮೆ ಮೊತ್ತ