ಜನರಿಗೋಸ್ಕರ ಶುರುವಾದ ನ್ಯಾನೋ

0
12

ಅಂದು ಮುಂಬೈನಲ್ಲಿ ವಿಪರೀತ ಮಳೆ. ಆ ಮಳೆಯಲ್ಲೇ ಕುಟುಂಬವೊಂದರ ಪಯಣ ಸಣ್ಣ ಸ್ಕೂಟರ್ ಮೇಲೆ ಸಾಗಿತ್ತು. ಹೆಂಡತಿ, ಇಬ್ಬರು ಮಕ್ಕಳನ್ನು ಕೂರಿಸಿಕೊಂಡು ತಂದೆ ಸ್ಕೂಟರ್ ಓಡಿಸುತ್ತಿದ್ದ. `ಇಂಥಾ ಮಳೆಯಲ್ಲಿ, ಸ್ಕೂಟರ್ ಸ್ಕಿಡ್ ಆಗಿ ಬಿದ್ದರೆ ಆ ಕುಟುಂಬದ ಕತೆ ಏನು’ ಎಂಬ ವಿಚಾರ ಅಲ್ಲೇ ಕಾರ್‌ನಲ್ಲಿ ಕೂತು ಈ ದೃಶ್ಯವನ್ನು ನೋಡುತ್ತಿದ್ದ ರತನ್ ಟಾಟಾ ಮನಸ್ಸಿನಲ್ಲಿ ಹಾದು ಹೋಯಿತು. ಅದೇನು ದುರದೃಷ್ಟವೋ ರತನ್ ಟಾಟಾ ಅಂದುಕೊಂಡ ಹಾಗೆಯೇ ಆಯಿತು. ಆ ಕ್ಷಣಕ್ಕೆ ರತನ್ ಅವರ ತಲೆಯಲ್ಲಿ ಶುರುವಾದದ್ದೇ, ಭಾರತದ ಮಧ್ಯಮ ವರ್ಗಕ್ಕೆ ಅತ್ಯಂತ ಕಡಿಮೆ ಬೆಲೆಯಲ್ಲಿ ಕೊಂಡುಕೊಳ್ಳುವಂಥ ಕಾರ್‌ವೊಂದನ್ನು ತಯಾರಿಸುವ ವಿಚಾರ. ಅಂದುಕೊಂಡದನ್ನು ಕೆಲವೇ ವರ್ಷದಲ್ಲಿ ರತನ್ ಟಾಟಾ ಮಾಡಿ ತೋರಿಸಿದ್ದರು. ಕೈಗೆಟುಕುವ ದರದಲ್ಲಿ ದೊರೆಯುವಂಥ ಟಾಟಾ ನ್ಯಾನೋ ಕಾರ್ ೨೦೦೮ರಲ್ಲಿ ಮಾರುಕಟ್ಟೆಗೆ ಬಂದಿತ್ತು.

Previous articleವಿಮಾನ ಹಾರಿಸಿ ಕಲಿತ ಪಾಠ
Next articleಪ್ರೀತಿಯ ಶ್ವಾನಕ್ಕಾಗಿ ಮಾತು ತಪ್ಪಿದ್ದ ಟಾಟಾ