ಚುನಾವಣೆ ಬಳಿಕ ವಿಧಾನಸಭೆ ವಿಸರ್ಜನೆ

0
33

ಕಲಬುರಗಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿಸಲು ಎಲ್ಲಾ ಸಿದ್ಧತೆಗಳು ನಡೆದಿವೆ. ಚುನಾವಣೆ ಬಳಿಕ ವಿಧಾನಸಭೆ ವಿಸರ್ಜನೆಯಾದರೆ ಅಚ್ಚರಿಪಡುವಂತದ್ದೇನಿಲ್ಲ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೊಸ ಬಾಂಬ್ ಸಿಡಿಸಿದರು.
ಭಾನುವಾರ ಇಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಬಾಗಲಕೋಟೆ ಚುನಾವಣೆಯ ಕುರಿತು ಸಚಿವ ಶಿವಾನಂದ ಪಾಟೀಲ್, ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಒಬ್ಬ ಸ್ವಾಮೀಜಿ ಮಾತನಾಡಿದ್ದಾರೆ. ಈ ವೇಳೆ ಶ್ರೀಗಳೆ ನಿಮ್ಮ ಆಶೀರ್ವಾದ ಇರಬೇಕು. ನಾವು ಒಕ್ಕಲಿಗರು ಹಾಗೂ ಲಿಂಗಾಯತರು ಸೇರಿ ಸರಕಾರ ಮಾಡುತ್ತೇವೆ ಎಂದಿದ್ದಾರೆ. ಆದರಿಂದ ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ಕೆಳಗೆ ಇಳಿಸಲು ಪ್ಲಾನ್ ಮಾಡಿದ್ದಾರೆ. ಅಲ್ಲದೇ, ಕಾಂಗ್ರೆಸ್‌ನವರು ಐದು ಗ್ಯಾರೆಂಟಿ ಯೋಜನೆಯ ಬಗ್ಗೆನೆ ಹೇಳುತ್ತಾರೆ. ಚುನಾವಣೆ ಬಳಿಕ ಕಾಂಗ್ರೆಸ್ ಸರಕಾರದ ಗ್ಯಾರಂಟಿ ಯೋಜನೆಗಳು ಬಂದ್ ಆಗಲಿವೆ ಎಂದು ವಿವರಿಸಿದರು.

Previous articleಇಸ್ಲಾಂಗೆ ಮತಾಂತರಕ್ಕೆ ಯತ್ನ: ಲವ್ ಜಿಹಾದ್‌ನ ಕರಾಳ ಮುಖ ಬಯಲು
Next articleಬಿಜೆಪಿ ಬಟನ್ ಎಕೆ 47 ಇದ್ದಂತೆ; ಅದನ್ನು ಒತ್ತಿದರೆ ಹಿಂದೂಗಳು ಸುರಕ್ಷಿತ