ಚೀಟಿ ಬರೆದಿಟ್ಟು ಶಿಶು ಬಿಟ್ಟುಹೋದ ತಾಯಿ

0
23

ಕುಷ್ಟಗಿ: ಮಗುವನ್ನು ನನಗೆ ಸಾಕಲು ಸಾಧ್ಯವಾಗುವುದಿಲ್ಲ, ಆದ್ದರಿಂದ ಯಾರಾದರೂ ಪುಣ್ಯಾತ್ಮರು ನನ್ನ ಮಗನನ್ನು ತೆಗೆದುಕೊಂಡು ಹೋಗಿ ಸಾಕಿ ಎಂದು ಹೆತ್ತಮ್ಮನೇ ಎಂಟು ದಿನದ ನವಜಾತ ಶಿಶುವಿನ ಕೈಯಲ್ಲಿ ಚೀಟಿ ಇಟ್ಟು ದೇವಸ್ಥಾನದ ಹತ್ತಿರ ಬಿಟ್ಟು ಹೋಗಿರುವ ಘಟನೆ ನಡೆದಿದೆ.
ಕುಷ್ಟಗಿ-ಹೊಸಪೇಟೆ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಕುರಬನಾಳ ಕ್ರಾಸ್ ತಾಯಮ್ಮನ ಗುಡಿ ಪಕ್ಕದ ಅಂಗಡಿ ಎದುರು ಶಿಶು ಬಿಟ್ಟು ಹೋಗಲಾಗಿದೆ. ದೇವಸ್ಥಾನಕ್ಕೆ ಆಗಮಿಸಿದ ಭಕ್ತರು ನವಜಾತ ಶಿಶುವನ್ನು ನೋಡಿ ತಕ್ಷಣ ಹೆದ್ದಾರಿ ಗಸ್ತು ಪೊಲೀಸ್ ಸಿಬ್ಬಂದಿಗೆ ಕರೆ ಮಾಡಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಎಎಸ್ಐ ಭರಮಪ್ಪ ವಾಲೀಕಾರ ಹಾಗೂ ಚಾಲಕ ಷರ್ಪುದ್ದೀನ್, ದೇವಸ್ಥಾನಕ್ಕೆ ಆಗಮಿಸಿ ಶಿಶುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಗು ಆರೋಗ್ಯವಾಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ಸಿಡಿಪಿಒ ಯಲ್ಲಮ್ಮ ಹಂಡಿ ಮಾತನಾಡಿ, ಕುರುಬನಾಳ ದೇವಸ್ಥಾನದ ಹತ್ತಿರ ಸಿಕ್ಕ ಎಂಟು ದಿನದ ಶಿಶುವನ್ನು ರಕ್ಷಣೆ ಮಾಡಲಾಗಿದೆ. ನಂತರ ಕೊಪ್ಪಳ ಜಿಲ್ಲಾ ಕೇಂದ್ರದಲ್ಲಿರುವ ದತ್ತು ಸ್ವೀಕಾರ ಕೇಂದ್ರಕ್ಕೆ ಹಸ್ತಾಂತರಿಸಲಾಗುವುದು ಎಂದು ತಿಳಿಸಿದರು.

Previous articleರಾಜ್ಯಾಧ್ಯಕ್ಷ ಅವಕಾಶ ಕೊಟ್ಟರೆ ಭಿನ್ನಾಭಿಪ್ರಾಯ ಶಮನ ಮಾಡುವೆ
Next articleಬೈಕ್‌ ಅಪಘಾತ: ಮೂವರು ಮಕ್ಕಳು ಸೇರಿ ಒಂದೇ ಕುಟುಂಬದ ಐವರು ಸಾವು