ನವದೆಹಲಿ: ಆಕಾಶಕ್ಕೆ ಏರಿದ್ದ ಚಿನ್ನದ ಬೆಲೆ ಗುರುವಾರ ೮೭೦ ರೂಪಾಯಿ ಕುಸಿದಿದೆ. ಒಂದು ವಾರದಲ್ಲಿ ೩,೪೦೦ ರೂಪಾಯಿ ಇಳಿಕೆ ಕಂಡಿದೆ. ಇದೇ ರೀತಿ ಬೆಳ್ಳಿಯ ದರ ದಲ್ಲೂ ವ್ಯತ್ಯಾಸ ಉಂಟಾಗಿದ್ದು ವಾರದಲ್ಲಿ ೩,೪೦೦ ಕಡಿಮೆಯಾಗಿದೆ.
ಮದುವೆ ಸೀಸನ್ ಹಿನ್ನೆಲೆ ಭಾರೀ ಪ್ರಮಾಣದಲ್ಲಿ ಏರಿಕೆ ಕಂಡಿದ್ದ ಹಳದಿ ಲೋಹ ಕಳೆದ ಒಂದು ವಾರದಿಂದ ಇಳಿಕೆ ಕಾಣುತ್ತಿದೆ. ಇಂದಿನ ಚಿನ್ನದ ಮಾರುಕಟ್ಟೆ ಯಲ್ಲಿ ೧೦ ಗ್ರಾಂ ಚಿನ್ನಕ್ಕೆ ೭೩,೮೫೦ ರೂಪಾಯಿ ಬೆಲೆ ಇದೆ. ಒಂದು ಕೆಜಿ ಬೆಳ್ಳಿ ಬೆಲೆ ೮೭,೭೫೦ ರೂಪಾಯಿ. ರೂಪಾಯಿ ಎದುರು ಡಾಲರ್ ಬಲ ಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಬಾಂಡ್‌ಗಳು ಮತ್ತು ಕ್ರಿಪ್ಟೊ ಕರೆನ್ಸಿಯಲ್ಲಿ ಹೆಚ್ಚಿನ ಹೂಡಿಕೆ ಆಗುತ್ತಿರುವುದು ಚಿನ್ನದ ಬೆಲೆ ಇಳಿಯಲು ಕಾರಣ ಎಂದು ತಜ್ಞರು ವಿಶ್ಲೇಷಿಸಿದ್ದಾರೆ. ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಗೆದ್ದ ನಂತರ ಡಾಲರ್ ಸೂಚ್ಯಂಕವು ೧೦೬ ಅಂಕಗಳನ್ನು ದಾಟಿದೆ. ಸುಮಾರು ಒಂದು ವರ್ಷದ ಗರಿಷ್ಠ ಮಟ್ಟ ದಾಖಲಿಸಿದೆ.