ಚಿಕ್ಕಮಗಳೂರು: ಗುಂಡೇಟಿನಿಂದ ಯುವಕ ಮೃತ್ಯು

0
23

ಚಿಕ್ಕಮಗಳೂರು: ಗುಂಡೇಟಿನಿಂದ ಯುವಕನೋರ್ವ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ಚಿಕ್ಕಮಗಳೂರು ತಾಲ್ಲೂಕು ಉಳುವಾಗಿಲು ಗ್ರಾಮದ ಕೆರೆಮಕ್ಕಿ ಯುವಕ ಸಂಜು(33) ಶೂಟೌಟ್‌ನಲ್ಲಿ ಮೃತಪಟ್ಟಿರುವ ಯುವಕ.

ಸಂಜು ಮೃತದೇಹ ಉಳುವಾಗಿಲು ಸಮೀಪ ಮುಖ್ಯರಸ್ತೆಯಲ್ಲಿ ಬಿದ್ದಿದ್ದು, ಎದೆಗೆ ತೋಟಕೋವಿಯಿಂದ ಗುಂಡು ತಗುಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಕಂಡುಬರುತ್ತಿದೆ.

ಮೃತದೇಹದ ಸಮೀಪವೇ ತೋಟದ ಬೇಲಿಯಲ್ಲಿ ತೋಟಕೋವಿಯೊಂದು ಪತ್ತೆಯಾಗಿದೆ. ಗುರುವಾರ ರಾತ್ರಿ ಈ ಘಟನೆ ನಡೆದಿದೆ. ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಶಿಕಾರಿಗೆ ತೆರಳಿದ ಸಂದರ್ಭದಲ್ಲಿ ಈ ಘಟನೆ ನಡೆದಿರಬಹುದು ಎಂದು ಶಂಕಿಸಲಾಗಿದೆ. ಇದು ಆಕಸ್ಮಿಕವಾಗಿ ಗುಂಡು ತಗುಲಿ ಆಗಿರುವ ಸಾವೇ ಅಥವಾ ಉದ್ದೇಶಪೂರ್ವಕವಾಗಿ ಕೊಲೆ ಮಾಡಲಾಗಿದೆಯೇ ? ಎನ್ನುವ ಪ್ರಶ್ನೆಗಳು ಎದ್ದಿವೆ. ಮೃತ ಸಂಜು ಕೆರೆಮಕ್ಕಿ ಗ್ರಾಮದ ದಿವಂಗತ ಜೂಲೇಗೌಡರ ಪುತ್ರ. ಅವಿವಾಹಿತನಾಗಿದ್ದು, ತಾಯಿ ಮತ್ತು ಸಹೋದರಿಯನ್ನು ಅಗಲಿದ್ದಾರೆ
ಮಲ್ಲಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Previous articleಹುಬ್ಬಳ್ಳಿ ಅಂಜಲಿ ಹತ್ಯೆ ಆರೋಪಿ ಪೊಲೀಸ್ ಬಲೆಗೆ
Next articleಕೋಟ್ಯಂತರ ಹೃದ್ರೋಗಿಗಳಿಗೆ ನೆರವಾಗಿದ್ದ ಮೋದಿ ಸರ್ಕಾರ