ಚಾಲಕನ ನಿಯಂತ್ರಣ ತಪ್ಪಿ ಬ್ರಿಜ್ ಬಳಿ ಉರುಳಿದ ಸಾರಿಗೆ ಬಸ್ ತಪ್ಪಿದ ಭಾರಿ ಅನಾಹುತ

0
44

ರಬಕವಿ ಬನಹಟ್ಟಿ ಸಮೀಪದ ಹಿಪ್ಪರಗಿ ಬ್ಯಾರೇಜ್‌ನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಾರಣ ಸಾರಿಗೆ ಬಸ್ ಉರುಳಿ ಬಿದ್ದ ಘಟನೆ ಮಂಗಳವಾರ ಬೆಳಿಗ್ಗೆ ನಡೆದಿದೆ.
ಜಮಖಂಡಿಯಿಂದ ಅಥಣಿಗೆ ತೆರಳುತ್ತಿದ್ದ ಬಸ್‌ನಲ್ಲಿ ಏಳೆಂಟು ಜನ ಮಾತ್ರವಿದ್ದರು. ಚಾಲಕ- ನಿರ್ವಾಹಕ ಸೇರಿ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ತಪ್ಪಿದ ಭಾರಿ ಅನಾಹುತ: ಹಿಪ್ಪರಗಿ ಬ್ಯಾರೇಜ್ ಹತ್ತಿರದ ಈ ಘಟನೆ ನಡೆದಿದ್ದು, ನದಿಯ ದಡದ ಪಕ್ಕ ಬಲ ಬದಿಯಲ್ಲಿ ಬಸ್‌ನ ಪಾಟಾ ಕಟ್ ಆದ ಕಾರಣ ದುರ್ಘಟನೆ ನಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಬಸ್‌ ಬಿದ್ದ ಕೂಡಲೇ ಒಳಗಿದ್ದ ಪ್ರಯಾಣಿಕರು ಹೊರಬರಲು ಆಗದೇ ಪರದಾಡುತ್ತಿದ್ದರು. ತಕ್ಷಣ ಸ್ಥಳದಲ್ಲಿದ್ದ ಸ್ಥಳೀಯರು ಬಸ್ಸಿನ ಕಿಟಕಿ ಗಾಜುಗಳನ್ನು ಒಡೆದು ಪ್ರಯಾಣಿಕರನ್ನು ಹೊರಗೆ ತಂದರು. ಅದೃಷ್ಟವಶಾತ್ ಯಾರಿಗೂ ಯಾವದೇ ಗಾಯಗಳಾಗಿಲ್ಲ. ಬನಹಟ್ಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Previous articleಜಾತಿ ಗಣತಿ ಮುಂದಿನ ಸಂಪುಟದಲ್ಲಿ ತೀರ್ಮಾನ
Next articleಸಿದ್ದರಾಮಯ್ಯ ಆಯ್ಕೆ ಅಸಿಂಧು ಕೋರಿದ್ದ ಅರ್ಜಿ ವಜಾ